'ಹೊಸಿಲಾಚೆ ಹೊಸಹೆಜ್ಜೆ' ಅವರ ಮೊದಲ ಕವನ ಸಂಕಲನ. ಚೌಕಟ್ಟಿನಾಚೆಯವರು& ಕಥಾಸಂಕಲನ, ಬೆಳಕಿನ ಬೀಜ, ಹೊಸ ದಿಗಂತ ಹೊಸದಾರಿ, ಬೀಜದೊಳಗಣ ವೃಕ್ಷ, ಅಕ್ಷರ ದಾಹ, ತೆರೆದಷ್ಟೂ ಅರಿವು ಮುಂತಾದವು ಅವರ ವಿಮರ್ಶಾ ಕೃತಿಗಳು. ಬೇಂದ್ರೆ ಕಾವ್ಯದ ಅವಧೂತ ಪ್ರಜ್ಞೆ, ತುಮಕೂರು ಜಿಲ್ಲೆಯ ಮಹಿಳಾ ಲೇಖಲೋಕ, ಕರ್ನಾಟಕದ ಸಂಸತಿ ಹಾಗೂ ಸಾಹಿತ್ಯದ ಮೇಲೆ ಅವಧೂತ ಪರಂಪರೆಗಳ ಪ್ರಭಾವ ಇವು ಅವರ ಸಂಶೋಧನೆಗಳು. ಅವಳ ಅರಿವು, ಕನ್ನಡಕ್ಕೊಬ್ಬರೇ ಗೋಕಾಕರು, ಕಂಡವರಿಗಷ್ಟೆ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ ಇವು ಸಂಪಾದಿತ ಕೃತಿಗಳು.