

ಕನ್ನಡಕ್ಕಿಂತ ತುಳು ಹೆಚ್ಚು ಸ್ವರವಂತ ಭಾಷೆಯಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಕಲಿಕೆಯ ಆಸಕ್ತಿಯಿದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಎಲ್ಲವನ್ನೂ ಚಿಕಿತ್ಸಕ ಬುದ್ಧಿ, ವಿವೇಕದಿಂದ ನೋಡುವ ಗುಣ ಬೆಳೆಸಿಕೊಳ್ಳಬೇಕು. ಕಲಿಸಿದ ಗುರುಗಳನ್ನು ಎಂದಿಗೂ ಮರೆಯಕೂಡದು.
ಇತ್ತೀಚೆಗಿನ ವರ್ಷಗಳಲ್ಲಿ ಸಂಶೋಧಕರು, ತಜ್ಞರು ಯಾರು ಎನ್ನುವ ಪ್ರಶ್ನೆ ಮೂಡುತ್ತಿದೆ. ಕು.ಶಿ. ಹೆಸರಲ್ಲಿ ಜಾನಪದ ಗ್ರಂಥ ಪ್ರಕಟಣೆಗೆ ಪ್ರಶಸ್ತಿಯ ಮೊತ್ತ ಬಳಕೆಗೆ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ಈಗಲೂ ಇರುವ ಜನಪದರ ವಿದ್ವತ್ ಗುರುತಿಸಬೇಕು. ಅವರ ಬಳಿ ಜಾನಪದದ ಅಪಾರ ಜ್ಞಾನದ ಗಣಿಯಿದೆ.