ದಲಿತರಿಗೆ ಗರ್ಜಿಸುವ ಧೈರ್ಯವಿತ್ತ ಪ್ರೊ. ಬಿ.ಕೆ.

ಉಡುಪಿ ಮಲ್ಪೆಯಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನ ಆಚರಿಸಲಾಯಿತು. ಜಯನ್​ ಮಲ್ಪೆ, ಪರಮೇಶ್ವರ್​ ಉಪ್ಪೂರು, ಗಣೇಶ್​ ನೆರ್ಗಿ, ದಯಾಕರ್​ ಮಲ್ಪೆ, ಹರೀಶ್​ ಸಾಲ್ಯಾನ್​, ಶಿವಣ್ಣ ಪರ್ಕಳ, ಪ್ರಸಾದ್​ ನೆರ್ಗಿ, ಭಗವಾನ್​ ಮಲ್ಪೆ, ರವಿರಾಜ್​ ಲಕ್ಷಿ$್ಮನಗರ, ಕೃಷ್ಣ ಶಿರಿಯಾನ್​ ನೆರ್ಗಿ, ನಾರಾಯಣ ಪರ್ಕಳ, ಬಿ.ಎನ್​. ಪ್ರಶಾಂತ್​, ಸುಶೀಲಕುಮಾರ್​ ಕೊಡವೂರು ಇತರರಿದ್ದರು.
ಉಡುಪಿ ಮಲ್ಪೆಯಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನ ಆಚರಿಸಲಾಯಿತು. ಜಯನ್​ ಮಲ್ಪೆ, ಪರಮೇಶ್ವರ್​ ಉಪ್ಪೂರು, ಗಣೇಶ್​ ನೆರ್ಗಿ, ದಯಾಕರ್​ ಮಲ್ಪೆ, ಹರೀಶ್​ ಸಾಲ್ಯಾನ್​, ಶಿವಣ್ಣ ಪರ್ಕಳ, ಪ್ರಸಾದ್​ ನೆರ್ಗಿ, ಭಗವಾನ್​ ಮಲ್ಪೆ, ರವಿರಾಜ್​ ಲಕ್ಷಿ$್ಮನಗರ, ಕೃಷ್ಣ ಶಿರಿಯಾನ್​ ನೆರ್ಗಿ, ನಾರಾಯಣ ಪರ್ಕಳ, ಬಿ.ಎನ್​. ಪ್ರಶಾಂತ್​, ಸುಶೀಲಕುಮಾರ್​ ಕೊಡವೂರು ಇತರರಿದ್ದರು.
Published on

* ಚಿಂತಕ ಜಯನ್​ ಮಲ್ಪೆ ಶ್ಲಾಘನೆ

* ಮಲ್ಪೆಯಲ್ಲಿ ಜನ್ಮದಿನ ಕಾರ್ಯಕ್ರಮ

ಉಡುಪಿ: ದಲಿತ ಚಳವಳಿಯ ಪಿತಾಮಹರಾದ ಪ್ರೊ. ಬಿ.ಕೃಷ್ಣಪ್ಪ ಅವರು ಅಧಿಕಾರಿಗಳ ಭ್ರಷ್ಟತೆ, ಭೂಮಾಲೀಕರ ದೌರ್ಜನ್ಯ, ಪೊಲೀಸರ ಅಮಾನುಷ ಕೃತ್ಯ, ರಾಜಕಾರಣಿಗಳ ಹುಸಿ ಜಾತ್ಯತೀತತೆ ಬಯಲು ಮಾಡಿ ದಲಿತರಲ್ಲಿ ಪ್ರಜ್ಞಾವಂತಿಕೆಯ ಜಾಗೃತಿ ಮೂಡಿಸಿದ್ದರು. ಅಲ್ಲದೆ, ಅಂಜುತ್ತಿದ್ದ ದಲಿತರಿಗೆ ಗರ್ಜಿಸುವ ಧೈರ್ಯ ತುಂಬಿದವರು. ರಾಜ್ಯದ ಶೋಷಿತ ಸಮುದಾಯಗಳಿಗೆ ಹೋರಾಟ ಹಾಗೂ ಸ್ವಾಭಿಮಾನದ ದಾರಿ ತೋರಿಸಿ ದಲಿತರ ಮನೆ, ಮನಗಳಲ್ಲಿ ಹೋರಾಟದ ಹಣತೆ ಹಚ್ಚಿದ್ದರು ಎಂದು ಜನಪರ ಹೋರಾಟಗಾರ ಜಯನ್​ ಮಲ್ಪೆ ಶ್ಲಾಘಿಸಿದರು.
ಉಡುಪಿ ಮಲ್ಪೆಯ ಸರಸ್ವತಿ ಜಾನಪದ ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಶಾಖೆ ಆಶ್ರಯದಲ್ಲಿ ಮಂಗಳವಾರ (ಜೂ.9) ಆಯೋಜಿಸಿದ್ದ ದಲಿತ ಚಳವಳಿಯ ಪಿತಾಮಹ ಪ್ರೊ. ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಲಿಷ್ಠ ಸಂಘಟನೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ್​ ಉಪ್ಪೂರು ಮಾತನಾಡಿ, ಪ್ರೊ. ಕೃಷ್ಣಪ್ಪ ಅವರು ನಾಡಿನ ಸಹಸ್ರ ಮುಗ್ಧರಿಗೆ ಬಾಯಾಗಿದ್ದರು. ಅವರಲ್ಲಿ ಸ್ವಾಭಿಮಾನ ತಂದರು. ದಲಿತ ಸಂಘಟನೆ ಕಟ್ಟಿ ಚದುರಿದ್ದ ಶೋಷಿತ ಸಮುದಾಯ ಒಟ್ಟುಗೂಡಿಸಿ ಒಂದೇ ಬಾವುಟದಡಿ ಸೇರಿಸಿದವರು ಎಂದರು.
ಹಿರಿಯ ದಲಿತ ಮುಖಂಡ ದಯಾಕರ್​ ಮಲ್ಪೆ ಮಾತನಾಡಿದರು. ದಸಂಸ ಜಿಲ್ಲಾ ನಾಯಕ ಹರೀಶ್​ ಸಾಲ್ಯಾನ್​ ಅಧ್ಯಕ್ಷತೆ ವಹಿಸಿದ್ದರು.
ದಲಿತ ನಾಯಕರಾದ ಶಿವಣ್ಣ ಪರ್ಕಳ, ಪ್ರಸಾದ್​ ನೆರ್ಗಿ, ರವಿರಾಜ್​ ಲಕ್ಷಿ$್ಮನಗರ, ಕೃಷ್ಣ ಶಿರಿಯಾನ್​ ನೆರ್ಗಿ, ನಾರಾಯಣ ಪರ್ಕಳ, ಬಿ.ಎನ್​. ಪ್ರಶಾಂತ್​, ಸುಶೀಲಕುಮಾರ್​ ಕೊಡವೂರು, ಅರುಣ್​ ಸಾಲ್ಯಾನ್​, ದೀಪಕ್​ ಕೊಡವೂರು, ಮುರಳಿ ಕೊಡಂಕೂರು, ಶ್ಯಾಮರಾಜ್​ ಸಾೃಬ್ರಕಟ್ಟೆ, ವಾದಿರಾಜ್​ ಪಾಳೇಕಟ್ಟೆ, ಹರೀಶ್​ ಅಮೀನ್​ ನೆರ್ಗಿ, ಗುಣವಂತ ತೊಟ್ಟಂ, ಮೋಹನ್​ ಗುಜ್ಜರಬೆಟ್ಟು, ನವೀನ್​ ಬನ್ನಂಜೆ, ಜಯರಾಜ್​ ಸಲ್ಯಾನ್​, ಕಲಾವಿದ ಮೋಹನ್​ದಾಸ್​ ನೆರ್ಗಿ ಇತರರು ಉಪಸ್ಥಿತರಿದ್ದರು.
ಭಗವಾನ್​ ಮಲ್ಪೆ ಸ್ವಾಗತಿಸಿದರು. ವಿನಯ್​ ಬಲರಾಮನಗರ ವಂದಿಸಿದರು.
"

ಕೃಷ್ಣಪ್ಪ ಅವರಂತಹ ಮೊದಲ ಸಾಲಿನ ದಲಿತ ನಾಯಕರ ಧೋರಣೆ ಅರಗಿಸಿಕೊಂಡೇ ರಾಜ್ಯದಲ್ಲಿ ದಲಿತ ಸಮುದಾಯ ಬಲಗೊಳ್ಳಬೇಕಿದೆ. ಪ್ರತ್ಯೇಕವಾಗಿ ಅವರು ಯಾವುದೇ ಸ್ವಂತ ವಾದ ಮಂಡಿಸದಿದ್ದರೂ ದಲಿತ ವಿವೋಚನೆಯ ಪ್ರಶ್ನೆ ಬಂದಾಗಲೆಲ್ಲ ಡಾ.ಅಂಬೇಡ್ಕರ್​ ಅವರತ್ತ ಕಣ್ಣು ತೆರೆಸಿದ್ದರು.

— ಗಣೇಶ್​ ನೆರ್ಗಿ. ಅಂಬೇಡ್ಕರ್​ ಯುವಸೇನೆಯ ಜಿಲ್ಲಾಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net