ಶಾಲೆ ಎದುರು ರಸ್ತೆಗೆ ವಿಭಜಕವಿಲ್ಲದೆ ಸಮಸ್ಯೆ

‘ನಮಸ್ತೆ ಕಲೆಕ್ಟರ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಚ್ಚಂಗಾಡ್ ಜಿಎಚ್‌ಎಸ್‌ನ ವಿದ್ಯಾರ್ಥಿಗಳು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಶಿಕ್ಷಕರು ಇದ್ದರು.
‘ನಮಸ್ತೆ ಕಲೆಕ್ಟರ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಚ್ಚಂಗಾಡ್ ಜಿಎಚ್‌ಎಸ್‌ನ ವಿದ್ಯಾರ್ಥಿಗಳು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಶಿಕ್ಷಕರು ಇದ್ದರು.
Published on
ಕಾಸರಗೋಡು: ತಚ್ಚಂಗಾಡ್ ಸರ್ಕಾರಿ ಪ್ರೌಢಶಾಲಾ ಮಕ್ಕಳು ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರ ‘ನಮಸ್ತೆ ಕಲೆಕ್ಟರ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಾದ ನಡೆಸಿದರು.
ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಆಧವ್‌ಅಶೋಕ್ ಮಾತನಾಡಿ, ತಾನು ಜಿಲ್ಲಾಧಿಕಾರಿಯಾಗಬೇಕು. ಡಿಸಿ ಆದರೆ ಜೋರು ಮಳೆ ಬರುವಾಗ ಮಕ್ಕಳಿಗೆ ರಜೆ ನೀಡಬಹುದು ಎಂದು ಹೇಳಿದ. ಶಾಲೆ ಎದುರು ರಸ್ತೆಯಲ್ಲಿ ಜೀಬ್ರಾ ಲೈನ್ ಮತ್ತು ರಸ್ತೆ ವಿಭಜಕ ಇಲ್ಲದೆ ಸಮಸ್ಯೆಯಾಗುತ್ತಿದೆ ಎಂದು ಮಕ್ಕಳು ಗಮನಸೆಳೆದರು. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಳೆದ ವರ್ಷದ ಉಜ್ವಲ ಬಾಲ್ಯ ಪ್ರಶಸ್ತಿ ವಿಜೇತೆ ಇಶಾನಾ ಎಸ್.ಪಾಲ್ ತಾನು ರಚಿಸಿದ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರ ರೇಖಾಚಿತ್ರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿ ಮಕ್ಕಳಿಗೆ ಚಾಕಲೆಟ್ ವಿತರಿಸಿ, ಮಕ್ಕಳೊಂದಿಗೆ ಛಾಯಾಚಿತ್ರ ತೆಗೆಸಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ತಚ್ಚಂಗಾಡ್ ಜಿಎಚ್‌ಎಸ್‌ನ ಇಪ್ಪತ್ತು ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕರಾದ ಟಿ.ಮಧುಸೂದನನ್, ಕೆ.ವಿ.ಸೌಮ್ಯಾ, ಕೆ.ಪ್ರೇಮಚಂದ್ರನ್, ಎಚ್.ಶಬ್ನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net