ಕಾಂಗ್ರೆಸ್​ನಿಂದ ಜನಪರ ಯೋಜನೆ

ಕುಂದಾಪುರದ ಜ್ಯೂನಿಯರ್​ ಕಾಲೇಜು ಹತ್ತಿರದ ಕಾಂಗ್ರೆಸ್​ ಪಕ್ಷದ ನಿವೇಶನದಲ್ಲಿ ಕುಂದಾಪುರ ಬ್ಲಾಕ್​ ಕಾಂಗ್ರೆಸ್​ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆಯನ್ನು ಸಚಿವ ಬೋಸರಾಜು ನೆರವೇರಿಸಿದರು. ಪ್ರಮುಖರಾದ ಮಂಜುನಾಥ ಭಂಡಾರಿ, ಕೆ.ಜಯಪ್ರಕಾಶ ಹೆಗ್ಡೆ, ದಿನೇಶ್​ ಹೆಗ್ಡೆ ಮೊದಲಾದವರಿದ್ದರು.
ಕುಂದಾಪುರದ ಜ್ಯೂನಿಯರ್​ ಕಾಲೇಜು ಹತ್ತಿರದ ಕಾಂಗ್ರೆಸ್​ ಪಕ್ಷದ ನಿವೇಶನದಲ್ಲಿ ಕುಂದಾಪುರ ಬ್ಲಾಕ್​ ಕಾಂಗ್ರೆಸ್​ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆಯನ್ನು ಸಚಿವ ಬೋಸರಾಜು ನೆರವೇರಿಸಿದರು. ಪ್ರಮುಖರಾದ ಮಂಜುನಾಥ ಭಂಡಾರಿ, ಕೆ.ಜಯಪ್ರಕಾಶ ಹೆಗ್ಡೆ, ದಿನೇಶ್​ ಹೆಗ್ಡೆ ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎನ್​.ಎಸ್​.ಭೋಸರಾಜು ಮಾಹಿತಿ
  • ಕುಂದಾಪುರ ಬ್ಲಾಕ್​ ನೂತನ ಕಚೇರಿಗೆ ಶಂಕುಸ್ಥಾಪನೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಜ್ಯದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್​ ಪಕ್ಷದ ಕಚೇರಿ ಪ್ರಾರಂಭಿಸಿಲು ಕಾನೂನು ಪ್ರಕಾರ ಜಾಗ ಪಡೆಯುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಸಿಕ್ಕಿದ ಸ್ವಲ್ಪ ಸಮಯದಲ್ಲೇ ಇಡೀ ರಾಜ್ಯದಲ್ಲಿರುವ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿವೆ. ಆರೆಸ್ಸೆಸ್​ ಹಾಗೂ ಅದರ ಅಂಗಸಂಸ್ಥೆಗಳಿಗೆ ನೂರಾರು ಎಕರೆ ಜಾಗ ನೀಡಿ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಕಾಂಗ್ರೆಸ್​ ಮುಕ್ತ ಭಾರತ ಮಾಡಬೇಕೆಂಬ ಪ್ರಯತ್ನ ಇತ್ತು. ಕಾಂಗ್ರೆಸ್​ ಬಗ್ಗೆ ಅವರಿಗೆ ಭಯ ಇದೆ. ಪಾರ್ಲಿಮೆಂಟ್​ನಲ್ಲಿ 400 ಸೀಟ್​ ಪಡೆದುಕೊಂಡ ಬಿಜೆಪಿ 200ಕ್ಕೆ ಇಳಿದಿದೆ. ಕಾಂಗ್ರೆಸ್​ ಪಕ್ಷಕ್ಕೆ ಬೆಳೆಯುವ, ಜನರ ಪ್ರೀತಿ, ವಿಶ್ವಾಸ ಗಳಿಸುವ ಅವಕಾಶ ಇದೆ ಎಂದು ಸಣ್ಣ ನೀರಾವರಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎನ್​.ಎಸ್​.ಭೋಸರಾಜು ಹೇಳಿದರು.
ಕುಂದಾಪುರದ ಜೂನಿಯರ್​ ಕಾಲೇಜು ಹತ್ತಿರದ ಕಾಂಗ್ರೆಸ್​ ಪಕ್ಷದ ನಿವೇಶನದಲ್ಲಿ ಕುಂದಾಪುರ ಬ್ಲಾಕ್​ ಕಾಂಗ್ರೆಸ್​ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ ಬುಧವಾರ ನೆರವೇರಿಸಿ ಮಾತನಾಡಿದರು.
ಚುನಾವಣೆಗೂ ಮುನ್ನ ದೇಶ ಸಮೃದ್ಧಿಯಾಗಿದೆ ಎಂದು ಹೇಳುವ ಪ್ರಧಾನ ಮಂತ್ರಿಗಳು, ಚುನಾವಣೆ ಮುಗಿದ ಬಳಿಕ ಉಳಿತಾಯ ಬಗ್ಗೆ ಮಾತನಾಡುತ್ತಾರೆ. ಮಹಿಳೆಯರಿಗೆ 2013ರಲ್ಲಿ ಶೇ.50 ಮೀಸಲಾತಿ ನೀಡುವ ಬಿಲ್​ ಮಂಡಿಸಲಾಗಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಕಾಂಗ್ರೆಸ್​ ಪಕ್ಷ ಹೆಚ್ಚಿನ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿ ಪ್ರತಿಯೊಂದರಲ್ಲಿ ರಾಜಕಾರಣ ಮಾಡುತ್ತಿದ್ದು, ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ, ಮುಖಂಡ ದಿನೇಶ್​ ಹೆಗ್ಡೆ, ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಶೋಕ ಕುಮಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ.ಗಫೂರ್​, ಮುಖಂಡರಾದ ದೇವಕಿ ಸಣ್ಣಯ್ಯ, ಕಿಶನ್​ ಹೆಗ್ಡೆ, ರಾಜು ಪೂಜಾರಿ, ಶಿವರಾಮ ಶೆಟ್ಟಿ, ಶಂಕರ ಕುಂದರ, ಉದಯ ಕುಮಾರ್​ ಶೆಟ್ಟಿ, ಜ್ಯೋತಿ ಹೆಬ್ಬಾರ್​, ವಿನೋದ ಕ್ರಾಸ್ಟೊ, ಹರೀಶ ಕಿಣಿ, ಬಿ.ಹಿರಿಯಣ್ಣ, ಸದಾನಂದ ಶೆಟ್ಟಿ, ಸತೀಶ ಕಿಣಿ, ಮುಸ್ತಾಕ್​ ಅಹಮ್ಮದ್​, ವಿಕಾಸ್​ ಹೆಗ್ಡೆ, ಕೃಷ್ಣದೇವ ಕಾರಂತ, ಪ್ರಸನ್ನ ಕುಮಾರ್​, ಕುಂದಾಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಎಚ್​.ಹರಿಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.
"

ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಪಂಚಾಯತ್​ ರಾಜ್​ ಸಚಿವರು ಸಭೆ ನಡೆಸಿದ್ದು, 2&3 ತಿಂಗಳಿನಲ್ಲಿ ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಮೀಸಲಾತಿ ಬಗ್ಗೆ ಪ್ರಯತ್ನ ಮುಂದುವರಿದಿದೆ. ಐಎಸ್​ಆರ್​ ಮುಖಾಂತರ ತೊಂದರೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದ್ದು, ಈ ಬಗ್ಗೆ ಎಚ್ಚರದಿಂದರಬೇಕು. ಈ ಬಗ್ಗೆ ಡಿಸಿಗೆ ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದು, ಎಲ್ಲ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ.

— ಎನ್​.ಎಸ್​.ಭೋಸರಾಜು, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net