ಸಾಂಪ್ರದಾಯಿಕ ಕಲೆಗಳಿಂದ ಸಂಸ್ಕೃತಿ ಪುನರುಜ್ಜೀವನ: ಪೇಜಾವರ ಶ್ರೀ

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
Published on
ಉಡುಪಿ: ಸಂಸ್ಕಾರ ಹಿರಿಯರಿಂದ ಬಂದ ಬಳುವಳಿ. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮದಾಗಿದೆ. ಸಾಂಪ್ರದಾಯಿಕ ಕಲೆ ಹಾಗೂ ಕ್ರೀಡೆಗಳಿಂದ ಸಂಸ್ಕೃತಿ ಪುನರುಜ್ಜೀವನ ಸಾಧ್ಯ. ಈ ನಿಟ್ಟಿನಲ್ಲಿ ಆನಂದ ಶರಧಿಯಲ್ಲಿ ನಡೆದ ಗ್ರಾಮೀಣ ಕ್ರೀಡೆಗಳು ಮತ್ತು ಭಜನೆ ಮಹತ್ವದ ಛಾಪು ಮೂಡಿಸಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಹೇಳಿದರು.

ಮಲ್ಪೆ ಕಡಲ ತೀರದ ಆನಂದ ಶರಧಿಯಲ್ಲಿ ಭಾನುವಾರ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಭಜನಾ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಸಮಾರೋಪ ಸಮಾರಂಭ ಉದ್ಘಾಟಿಸಿದರು.
ಮಲ್ಪೆ ಕಡಲತೀರದಲ್ಲಿರುವ ಅನೇಕ ಭಜನಾ ಮಂದಿರಗಳಿಂದ ಸಂಸತಿ ಉಳಿಸುವ ಕಾರ್ಯ ನಡೆಯುತ್ತಿದೆ. ಈ ಜಾಗದಲ್ಲಿ ಪ್ರತಿ ವರ್ಷ ಈ ರೀತಿಯ ಸಾಂಪ್ರದಾಯಿಕ ಉತ್ಸವ ನಡೆಯುತ್ತಿರಬೇಕು. ಪ್ರಸ್ತುತ ಕೃಷ್ಣನ ಪರಿಸರ ವಉದಪುಲ್ಪೆ ತನಕ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ಕೃಷ್ಣ ಮಠದ ರಥ ಆನಂದ ಶರಧಿವರೆಗೆ ಬಂದರೂ ಅಚ್ಚರಿಯಿಲ್ಲ ಎಂದು ಹೇಳಿದರು.

ಶಾಸಕ ಗುರ್ಮೆ ಸುರೇಶ್​ ಶೆಟ್ಟಿ , ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್​, ವಾಗ್ಮಿ ಪ್ರಕಾಶ್​ ಮಲ್ಪೆ, ಉದ್ಯಮಿಗಳಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಗಂಗಾಪ್ರಸಾದ್​, ಮನೋಹರ್​ ಶೆಟ್ಟಿ, ಪ್ರಸಾದ್​ರಾಜ್​ ಕಾಂಚನ್​, ಆನಂದ ಪಿ. ಸುವರ್ಣ, ಕೊಡವೂರು ದಿವಾಕರ ಶೆಟ್ಟಿ ತೋಟದಮನೆ , ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್​ ಮತ್ತು ಲೆಕ್ಕಪರಿಶೋಧಕ ಗಣೇಶ್​ ಹೆಬ್ಬಾರ್​, ಹರಿಯಪ್ಪ ಕೋಟ್ಯಾನ್​, ವಾಸುದೇವ ಭಟ್​, ಶ್ರೀನಿವಾಸ ಭಟ್​, ಗೀತಾ ವಾಗ್ಲೆ, ನೀತಾ ಪ್ರಭು, ಸಂಟನಾ ಕಾರ್ಯದರ್ಶಿ ಗೋವಿಂದ ರಾಜ್​ ಉಪಸ್ಥಿತರಿದ್ದರು. ಷಣ್ಮುಖ ಹೆಬ್ಬಾರ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net