

* ಆ.27ರಂದು ಕಾನ್ಪುರದಲ್ಲಿ ನಡೆದಿದ್ದ ದುರ್ಘಟನೆ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಆ.27ರಂದು ಸಂಭವಿಸಿದ್ದ ಖಾಸಗಿ ತರಬೇತಿ ವಿಮಾನ ಪತನದ ದುರ್ಘಟನೆಯಲ್ಲಿ ಉಡುಪಿ ಜಿಲ್ಲೆಯ ಪೈಲೆಟ್ ಅಭಿಷೇಕ್ ಪೂಜಾರಿ (28) ನಿಧನರಾಗಿದ್ದಾರೆ.
ಬಿಇ ಮೆಕಾನಿಕಲ್ ಇಂಜಿನೀಯರ್
ಕಳೆದ ಸಪ್ಟೆಂಬರ್ ತಿಂಗಳಲ್ಲಿ ಅಭಿಷೇಕ್ ತನ್ನ ತಂದೆಯೊಂದಿಗೆ ಕಣಜಾರು ಗ್ರಾಮಕ್ಕೆ ಬಂದು 4-5 ದಿನ ಉಳಿದು ಹೋಗಿದ್ದನು. ನನ್ನ ಅಕ್ಕನಿಗೆ ಇಬ್ಬರು ಮಕ್ಕಳಿದ್ದು, ಅವರಿಬ್ಬರೂ ಹುಟ್ಟಿದ್ದು ಬೈಲೂರಿನ ಆಸ್ಪತ್ರೆಯಲ್ಲಿ. ನನ್ನ ಬಾವ ಮುಂಬೈನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರಿಂದ ಮಕ್ಕಳು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಪೈಲಟ್ ಆಗುವ ಕನಸು ಹೊಂದಿದ್ದ ಅಭಿಷೇಕ್ನ ನಿಧನ ತುಂಬ ದು:ಖ ಉಂಟುಮಾಡಿದೆ.
— ಜೀವನ್ ಪೂಜಾರಿ. ಮೃತ ಅಭಿಷೇಕ್ನ ಮಾವ.