ಅಪಾಯಕಾರಿ ತಿರುವು, ಏರಿಳಿತ ಸರಿಪಡಿಸಲು ಆದ್ಯತೆ

ಹಾವಂಜೆ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಾಗರಿಗೆ ಯಶ್​ಪಾಲ್​ ಸುವರ್ಣ ಗುದ್ದಲಿಪೂಜೆ ನೆರವೇರಿಸಿದರು. ಉದಯ ಕೋಟ್ಯಾನ್​, ಅಜಿತ ಗೋಳಿಕಟ್ಟೆ, ಆಶಾ ಡಿ. ಪೂಜಾರಿ, ಗುರುರಾಜ ಕಾರ್ತಿಬೈಲು, ಸುಜಾತಾ ಉಮೇ ಶೆಟ್ಟಿ, ಸುಂದರ ಪೂಜಾರಿ ಇತರರಿದ್ದರು.
ಹಾವಂಜೆ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಾಗರಿಗೆ ಯಶ್​ಪಾಲ್​ ಸುವರ್ಣ ಗುದ್ದಲಿಪೂಜೆ ನೆರವೇರಿಸಿದರು. ಉದಯ ಕೋಟ್ಯಾನ್​, ಅಜಿತ ಗೋಳಿಕಟ್ಟೆ, ಆಶಾ ಡಿ. ಪೂಜಾರಿ, ಗುರುರಾಜ ಕಾರ್ತಿಬೈಲು, ಸುಜಾತಾ ಉಮೇ ಶೆಟ್ಟಿ, ಸುಂದರ ಪೂಜಾರಿ ಇತರರಿದ್ದರು.
Published on: 

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

* 4.30 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಉಡುಪಿ: ಹಾವಂಜೆ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಬೇಡಿಕೆಯಂತೆ ಲೋಕೋಪಯೋಗಿ ಇಲಾಖೆಯ ಮೂಲಕ ರಾಜ್ಯ ಹೆದ್ದಾರಿಯ ಅಗಲೀಕರಣ ನಡೆಯಲಿದೆ. ಈ ಭಾಗದಲ್ಲಿದ್ದ ಅವೈಜ್ಞಾನಿಕ ಮಾರ್ಗ, ಅಲ್ಲಲ್ಲಿ ಅಪಾಯಕಾರಿ ತಿರುವು ಹಾಗೂ ಏರಿಳಿತ ಸರಿಪಡಿಸಲಾಗುವುದು. ವಾಹನಗಳ ಸುಗಮ ಸಂಚಾರಕ್ಕೆ ಪೂರಕವಾಗುವಂತೆ ರಸ್ತೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಕೆ.ಜಿ. ರೋಡ್​ ಪೆರ್ಡೂರು ರಾಜ್ಯ ಹೆದ್ದಾರಿಯ ಹಾವಂಜೆ ಗ್ರಾಪಂ ವ್ಯಾಪ್ತಿಯ ಕೀಳಂಜೆ ಶಾಲೆಯಿಂದ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನ ವರೆಗೆ ಸುಮಾರು 4.30 ಕೋಟಿ ರೂ. ವೆಚ್ಚದಲ್ಲಿ 1.1 ಕಿಮೀ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ಉದಯ ಕೋಟ್ಯಾನ್​, ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಅಜಿತ ಗೋಳಿಕಟ್ಟೆ, ಮಾಜಿ ಅಧ್ಯೆ ಆಶಾ ಡಿ. ಪೂಜಾರಿ, ಮಾಜಿ ಉಪಾಧ್ಯಕ್ಷ ಗುರುರಾಜ ಕಾರ್ತಿಬೈಲು, ಗ್ರಾಪಂ ಮಾಜಿ ಸದಸ್ಯೆ ಸುಜಾತಾ ಉಮೇ ಶೆಟ್ಟಿ, ವಾರ್ಡ್​ ಅಧ್ಯಕ್ಷ ಸುಂದರ ಪೂಜಾರಿ, ಜಗದೀಶ ಸನಿಲ್​, ಗಣೇಶ ಪೂಜಾರಿ, ವಿಶ್ವನಾಥ, ಗಣಪತಿ ನಾಯಕ, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಆಚಾರ್ಯ, ಪ್ರಸಾದ ಸುವರ್ಣ, ಜಯಕರ ದಾಸ, ರಾಜೇಶ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.