ಕಲಿಕೆಯೊಂದಿಗೆ ನೀಡಿ ಕೌಶಲವರ್ಧನೆಗೆ ಆದ್ಯತೆ

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ವಿದ್ಯಾರ್ಥಿ ಸಂಘವನ್ನು ಡಾ. ಜಿ.ಎಸ್​. ಚಂದ್ರಶೇಖರ್​ ಉದ್ಘಾಟಿಸಿದರು. ಡಾ. ಮಿಥುನ್​ ಎಸ್​., ಡಾ. ಪಿ.ಎಸ್​. ಐತಾಳ್​, ಡಾ. ರಾಮು ಎಲ್​., ಡಾ. ಮಂಜುನಾಥ್​ ಕರಬ, ಡಾ.ಆನಂದ್​ ರಾಯಮಾನೆ, ಸುಮಲತಾ, ಪ್ರತಿಭಾ ಆಚಾರ್ಯ,ಡಾ. ವಿನಯಕುಮಾರ್​ ಇತರರಿದ್ದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ವಿದ್ಯಾರ್ಥಿ ಸಂಘವನ್ನು ಡಾ. ಜಿ.ಎಸ್​. ಚಂದ್ರಶೇಖರ್​ ಉದ್ಘಾಟಿಸಿದರು. ಡಾ. ಮಿಥುನ್​ ಎಸ್​., ಡಾ. ಪಿ.ಎಸ್​. ಐತಾಳ್​, ಡಾ. ರಾಮು ಎಲ್​., ಡಾ. ಮಂಜುನಾಥ್​ ಕರಬ, ಡಾ.ಆನಂದ್​ ರಾಯಮಾನೆ, ಸುಮಲತಾ, ಪ್ರತಿಭಾ ಆಚಾರ್ಯ,ಡಾ. ವಿನಯಕುಮಾರ್​ ಇತರರಿದ್ದರು.
Published on

ವಿದ್ಯಾರ್ಥಿಗಳಿಗೆ ಡಾ. ಜಿ.ಎಸ್​. ಚಂದ್ರಶೇಖರ್​ ಸಲಹೆ

ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಉಡುಪಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕೌಶಲವರ್ಧನೆಗೂ ಆದ್ಯತೆ ನೀಡಬೇಕಿದೆ. ವಿವಿಧ ಸಾಮಾಜಿಕ ಪಿಡುಗುಗಳು ಯುವಸಮುದಾಯವನ್ನು ಬಲಿಪಶು ಮಾಡುತ್ತಿದ್ದು, ಜಾಗೃತರಾಗಿರಬೇಕು. ಶಿಸ್ತಿನ ಜೀವನ ನಿರ್ವಹಿಸಬೇಕು ಎಂದು ಪೂರ್ಣಪ್ರಜ್ಞ ಕಾಲೇಜ್​ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ತಿಳಿಸಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ (ಸ್ವಾಯತ್ತ)ನ ಮುಖ್ಯ ಸಭಾಂಗಣದಲ್ಲಿ ಗುರುವಾರ (ಸೆ.24) ಆಯೋಜಿಸಿದ್ದ 2026&-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಜ್ಞಾ ವಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುನಾಗ್​ ಓರ್ಥೋ ಕೇರ್​ ಮತ್ತು ಸ್ಪೆಶಾಲಿಟಿ ಸೆಂಟರ್​ ಉಡುಪಿಯ ಕನ್ಸಲ್ಟೆಂಟ್​ ಸೈಕಿಯಾಟ್ರಿಸ್ಟ್​ ಡಾ. ಮಿಥುನ್​ ಎಸ್​., ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಪಿಐಎಂ ನಿದೇರ್ಶಕ ಡಾ. ಪಿ.ಎಸ್​. ಐತಾಳ್​ ಮಾತನಾಡಿದರು. ಕಾಲೇಜ್​ನ ಪ್ರಾಂಶುಪಾಲ ಡಾ. ರಾಮು ಎಲ್​., ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಮಂಜುನಾಥ್​ ಕರಬ, ಡಾ.ಆನಂದ್​ ರಾಯಮಾನೆ, ಸುಮಲತಾ, ಪ್ರತಿಭಾ ಆಚಾರ್ಯ, ಐಕ್ಯೂಎಸಿ ಸಂಯೋಜಕ ಡಾ. ವಿನಯಕುಮಾರ್​ ಉಪಸ್ಥಿರಿದ್ದರು.

ಸಂಘದ ಅಧ್ಯಕ್ಷೆ ಜಾಹ್ನವಿ ಸ್ವಾಗತಿಸಿದರು. ಸ್ವಾತಿ ಜೋಶಿ ಪರಿಚಯಿಸಿದರು. ಅಮೃತಾ ಪುತ್ರನ್​ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸ್ಪಂದನಾ ವಂದಿಸಿದರು. ಕಾರ್ಯಕ್ರಮದ ನಂತರ ಡಾ. ಮಿಥುನ್​ ಅವರಿಂದ 'ಮೊಬೈಲ್​ ಡಿಎಡಿಕ್ಷನ್​' ವಿಷಯದ ಕುರಿತು ವಿಶೇಷ ಉನ್ಯಾಸ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net