ಸಂಸ್ಕೃತಿ ರಕ್ಷಣೆಗೆ ನೀಡಿ ಆದ್ಯತೆ

 ಪಿಂಚಣಿದಾರರ ಸಂಘದ ರಾಜ್ಯ ಸಮ್ಮೇಳನವನ್ನು ಎಂಎಸ್ ರಾಜ್ಯಧ್ಯಕ್ಷ ಅಧ್ಯಕ್ಷ ಬಿ.ಶಿವಾಜಿ ಸುದರ್ಶನ್ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಬಿ.ಜಯಪ್ರಕಾಶ್, ಸಮಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಭಟ್ ಮತ್ತಿತರರಿದ್ದರು.
ಪಿಂಚಣಿದಾರರ ಸಂಘದ ರಾಜ್ಯ ಸಮ್ಮೇಳನವನ್ನು ಎಂಎಸ್ ರಾಜ್ಯಧ್ಯಕ್ಷ ಅಧ್ಯಕ್ಷ ಬಿ.ಶಿವಾಜಿ ಸುದರ್ಶನ್ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಬಿ.ಜಯಪ್ರಕಾಶ್, ಸಮಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಭಟ್ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಪಿಂಚಣಿದಾರರ ಹಕ್ಕುಗಳನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ದೇಶದ ಸಂಸ್ಕೃತಿಯನ್ನು ರಕ್ಷಿಸುವ ಬಗ್ಗೆ ಹೆಚ್ಚಿನ ಒಲವು ತೋರಿಸಲು ಪಿಂಚಣಿದಾರರ ಸಂಘಟನೆ ಬದ್ಧವಾಗಿರಬೇಕು ಎಂದು ಬಿಎಂಎಸ್ ರಾಜ್ಯಾಧ್ಯಕ್ಷ ಅಧ್ಯಕ್ಷ ಬಿ.ಶಿವಾಜಿ ಸುದರ್ಶನ್ ಹೇಳಿದರು.
ಕಾಸರಗೋಡು ಟೌನ್‌ಹಾಲ್‌ನಲ್ಲಿ 28ನೇ ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜ್ಯಾಧ್ಯಕ್ಷ ಬಿ.ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಭಟ್ ಮುಖ್ಯ ಭಾಷಣ ಮಾಡಿದರು.
ಎಫ್‌ಇಟಿಒ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಮಹಾದೇವ್, ಎನ್‌ಟಿಯು ರಾಜ್ಯ ಉಪಾಧ್ಯಕ್ಷ ಕೆ.ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಜಯಭಾನು ಪಿ. ಸ್ವಾಗತಿಸಿದರು. ಸಾಂಸ್ಕೃತಿಕ ಸಭೆಯಲ್ಲಿ ಆರ್‌ಎಸ್‌ಎಸ್ ಕ್ಷೇತ್ರೀಯ ಸಹ ಬೌದ್ಧಿಕ್ ಪ್ರಮುಖ್ ಕೆ.ಪಿ.ರಾಧಾಕೃಷ್ಣನ್ ಸಾಮಾಜಿಕ ಪರಿವರ್ತನೆಯಲ್ಲಿ ಪಿಂಚಣಿದಾರರ ಪಾತ್ರದ ಕುರಿತು ಮಾತನಾಡಿದರು. ಪ್ರತಿನಿಧಿ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಪಿ.ಎನ್.ಬಾಲಕೃಷ್ಣನ್ ದಿಕ್ಸ್ಸೂಚಿ ಭಾಷಣ ಮಾಡಿದರು.

ಪದಾಧಿಕಾರಿಗಳ ಆಯ್ಕೆ

ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಬಿ.ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಕೀಲ ಜಯಭಾನು ಪಿ., ಕೋಶಾಧಿಕಾರಿ ಜಿ.ಗೋಪಕುಮಾರ್ ಹಾಗೂ ಇತರ 44 ಮಂದಿ ಸದಸ್ಯರ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಫೋಟೋ ಇದೆ: ಕೆಎಸ್‌ಡಿ-9ಮಾರ್ಚ್-ಬಿಎಂಎಸ್:
ಪಿಂಚಣಿದಾರರ ಸಂಘದ ರಾಜ್ಯ ಸಮ್ಮೇಳನವನ್ನು ಎಂಎಸ್ ರಾಜ್ಯಧ್ಯಕ್ಷ ಅಧ್ಯಕ್ಷ ಬಿ.ಶಿವಾಜಿ ಸುದರ್ಶನ್ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಬಿ.ಜಯಪ್ರಕಾಶ್, ಸಮಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಭಟ್ ಮತ್ತಿತರರಿದ್ದರು.
***********************
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net