ಕಲಾರಾಧನೆಗೆ ಹೆಸರುವಾಸಿ ಉಡುಪಿ ಪರಿಸರ

ಉಡುಪಿ ಎಂಜಿಎಂ ಕಾಲೇಜ್​ನಲ್ಲಿ ಯಕ್ಷಗಾನ ಸರ್ಟಿಫಿಕೇಟ್​ ಕೋರ್ಸ್​ಅನ್ನು ಪ್ರೊ. ಡಾ. ಗಾಯತ್ರಿ ಪೈ ಉದ್ಘಾಟಿಸಿದರು. ಡಾ. ಬಿ. ಜಗದೀಶ್​ ಶೆಟ್ಟಿ, ಕೃಷ್ಣಮೂರ್ತಿ ಭಟ್​ ಬಗ್ವಾಡಿ, ಪ್ರೊ. ಶೈಲಜಾ, ರಾಘವೇಂದ್ರ ತುಂಗ ಕೆ., ಶ್ರೀಧರ್​ ರಾವ್​ ಇದ್ದರು.
ಉಡುಪಿ ಎಂಜಿಎಂ ಕಾಲೇಜ್​ನಲ್ಲಿ ಯಕ್ಷಗಾನ ಸರ್ಟಿಫಿಕೇಟ್​ ಕೋರ್ಸ್​ಅನ್ನು ಪ್ರೊ. ಡಾ. ಗಾಯತ್ರಿ ಪೈ ಉದ್ಘಾಟಿಸಿದರು. ಡಾ. ಬಿ. ಜಗದೀಶ್​ ಶೆಟ್ಟಿ, ಕೃಷ್ಣಮೂರ್ತಿ ಭಟ್​ ಬಗ್ವಾಡಿ, ಪ್ರೊ. ಶೈಲಜಾ, ರಾಘವೇಂದ್ರ ತುಂಗ ಕೆ., ಶ್ರೀಧರ್​ ರಾವ್​ ಇದ್ದರು.
Published on

* ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಅಭಿಮತ

* ಯಕ್ಷಗಾನ ಸರ್ಟಿಫಿಕೇಟ್​ ಕೋರ್ಸ್​ ಉದ್ಘಾಟನೆ

ಉಡುಪಿ: ಜಗದಲ್ಲಿರುವ ಎಲ್ಲ ಕಲೆಗಳೂ ಸಹ ಜನರ ಮನಸ್ಸನ್ನು ಅರಳಿಸಿ ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಶ್ರೀಕೃಷ್ಣನ ಸಾನ್ನಿಧ್ಯವಿರುವ ಉಡುಪಿ ಪರಿಸರವು ಕಲಾರಾಧನೆಗೆ ಹೆಸರುವಾಸಿಯಾಗಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರವು ಐದು ದಶಕದಿಂದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಯಕ್ಷಗಾನ ಕಲೆಗೆ ಅಕಾಡೆಮಿಕ್​ ಸ್ವರೂಪ ನೀಡಿ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಎಂಜಿಎಂ ಕಾಲೇಜ್​ನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಹೇಳಿದರು.
ಎಂಜಿಎಂ ಕಾಲೇಜ್​ನ ಮುದ್ದಣ ಮಂಟಪದಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರ, ಎಂಜಿಎಂ  ಕಾಲೇಜ್​ನ ಯಕ್ಷಗಾನ ಮತ್ತು ನಾಟಕ ರಂಗ, ಐಕ್ಯೂಎಸಿ ಸಂಯುಕ್ತವಾಗಿ ಆಯೋಜಿಸಿರುವ ಪ್ರಸಕ್ತ ಶೈಕ್ಷಣಿಕ ಸಾಲಿನ ಯಕ್ಷಗಾನ ಸರ್ಟಿಫಿಕೇಟ್​ ಕೋರ್ಸ್​ ಉದ್ಘಾಟಿಸಿ ಮಾತನಾಡಿದರು. 
ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ, ಯಕ್ಷಗುರು ಕೃಷ್ಣಮೂರ್ತಿ ಭಟ್​ ಬಗ್ವಾಡಿ, ಕಾಲೇಜ್​ನ ಐಕ್ಯೂಎಸಿ ಸಂಯೋಜಕಿ ಪ್ರೊ. ಶೈಲಜಾ ಉಪಸ್ಥಿತರಿದ್ದರು.
ಯಕ್ಷಗಾನ ಮತ್ತು ನಾಟಕ ರಂಗದ ಸಂಯೋಜಕ ರಾಘವೇಂದ್ರ ತುಂಗ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಸಂಯೋಜಕ ಶ್ರೀಧರ್​ ರಾವ್​ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net