ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪತ್ರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಲಾವಿದ ಸತೀಶ್ಚಂದ್ರ ಅವರು ರಚಿಸಿ ಉಡುಗೊರೆಯಾಗಿ ಕೊಟ್ಟಿದ್ದ ಚಿತ್ರಕಲೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಲಾವಿದ ಸತೀಶ್ಚಂದ್ರ ಅವರು ರಚಿಸಿ ಉಡುಗೊರೆಯಾಗಿ ಕೊಟ್ಟಿದ್ದ ಚಿತ್ರಕಲೆ.
Published on

* ಚಿತ್ರ ರಚಿಸಿ ನೀಡಿದ್ದ ಕಲಾವಿದ ಸತೀಶ್ಚಂದ್ರ

ಉಡುಪಿ: ಪರ್ಯಾಯ ಪುತ್ತಿಗೆ ಮಠದಿಂದ ನ.28ರಂದು ಆಯೋಜಿಸಿದ್ದ ಸಾಮೂಹಿಕ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪಾಲ್​ ಗ್ರೂಪ್​ನ ಎಂಜಿಪಿಎಸ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಾವಿದ ಸತೀಶ್ಚಂದ್ರ ಎಸ್​.ಎಸ್​. ಎಂಬವರು 'ಶ್ರೀಕೃಷ್ಣನ ಸಮ್ಮುಖದಲ್ಲಿ ಗೀತೆ ಪಠಿಸುತ್ತಿರುವ ಮೋದಿ'ಯ ಚಿತ್ರವನ್ನು ಬಿಡಿಸಿ ಉಡುಗೊರೆಯಾಗಿ ನೀಡಿದ್ದರು. 
ಸುಂದರವಾದ ಆ ಚಿತ್ರಕಲೆಯಿಂದ ಸಂತಸಗೊಂಡಿರುವ ಪ್ರಧಾನಿ ಮೋದಿ ಅವರು ಮೆಚ್ಚುಗೆ ಪತ್ರ ರವಾನಿಸಿ ಶುಭಹಾರೈಸಿದ್ದಾರೆ.
ಸತೀಶ್ಚಂದ್ರ ಅವರ ಕಲಾ ನೈಪುಣ್ಯತೆ ಶ್ರೇಷ್ಠವಾಗಿದೆ. ಈ ಚಿತ್ರವು ಉಡುಪಿ ಮತ್ತು ಕರ್ನಾಟಕ ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಇಂತಹ ಯುವ ಪ್ರತಿಭೆಗಳ ಸಹಾಯದಿಂದ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಆಶಿಸಿದ್ದು, ಪ್ರೀತಿಯಿಂದ ಸುಂದರ ಉಡುಗೊರೆ ನೀಡಿದ್ದಕ್ಕೆ ಸಂತಸವಾಗಿದೆ ಎಂದು ಪ್ರಧಾನಿ ಮೋದಿ ಅವರು ನೀಡಿರುವ ಪತ್ರದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net