ಅಯೋಧ್ಯಾ ಭ್ರಷ್ಟಾಚಾರದಲ್ಲಿ ಆರ್ಎಸ್ಎಸ್, ಬಿಜೆಪಿ ಹಾಗೂ ವಿಎಚ್ಪಿಯ ಸದಸ್ಯರೇ ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ಅವರ ಮಾಜಿ ಕಾರ್ಯದರ್ಶಿಯೂ ಇದ್ದಾರೆ. ಲೆಕ್ಕಕ್ಕೇ ಸಿಗದಷ್ಟು ಕೋಟಿ ರೂಪಾಯಿ ಸಂಖ್ಯೆಯಲ್ಲಿ ಹಣ, ವಜ್ರ, ಬಂಗಾರ, ಬೆಳ್ಳಿಯನ್ನು ಲೂಟಿ ಮಾಡಲಾಗಿದೆ. ರಾಮನ ಹೆಸರಲ್ಲಿ ಅಧಿಕಾರ ಪಡೆದು ರಾಮನ ಸ್ವತ್ತು ಲೂಟಿ ಮಾಡುವುದೂ ರಾಷ್ಟ್ರ ಪ್ರೇಮವೇ? ಶ್ರೀರಾಮನಿಗೇ ಮೋಸ ಮಾಡಿದ್ದು, ಇದರಂತಹ ದೇಶದ್ರೋಹ ಮತ್ತೊಂದಿಲ್ಲ. ಪ್ರಕರಣಕ್ಕೆ ಸಂಭಂದಿಸಿ 8 ಮಂದಿಯನ್ನು ಬಂಧಿಸಿದ್ದೀರಿ. ಆದರೆ, ಈವರೆಗೂ ದೇಗುಲ ಟ್ರಸ್ಟ್ನ ಅಧ್ಯಕ್ಷ, ಕಾರ್ಯದರ್ಶಿಯನ್ನು ಏಕೆ ಬಂಧಿಸಿಲ್ಲ ಎಂದು ಉಗ್ರಪ್ಪ ಪ್ರಶ್ನಿಸಿದರು.