_1775298504632.webp?w=480&auto=format%2Ccompress&fit=max)
_1775298504632.webp?w=480&auto=format%2Ccompress&fit=max)
ವಿಜಯವಾಣಿಸುದ್ದಿಜಾಲ ಕುಂಬಳೆ
ಕಚ್ಚಾವಸ್ತುಗಳ ಬೆಲೆ ಕೆಲವು ತಿಂಗಳುಗಳಿಂದಸತತ ಏರಿಕೆಯಾಗಿದೆ.ಜತೆಗೆಉತ್ಪಾದನಾ ವೆಚ್ಚದಲ್ಲೂ ತೀವ್ರಏರಿಕೆಯಿಂದ ಸೋಡಾ ಸಹಿತ ತಂಪುಪಾನೀಯಗಳ ಬೆಲೆ ಹೆಚ್ಚಿಸಲುನಿರ್ಧರಿಸಲಾಗಿದ್ದು,ಕೇರಳದಸೋಡಾ ಮತ್ತು ತಂಪು ಪಾನೀಯಗಳಉತ್ಪಾದಕರ ಸಂಘದ ಕಾಸರಗೋಡು ಜಿಲ್ಲಾಸಮಿತಿ ನೇತೃತ್ವ(ಎಂ.ಎ.ಎಸ್.ಎಸ್.)ದಲ್ಲಿಬೆಲೆ ಏರಿಕೆ ಕುರಿತು ಮಹತ್ವದನಿರ್ಧಾರ ಪ್ರಕಟಿಸಲಾಗಿದೆ.
ಕೆಲವುವಾರಗಳಿಂದ ಅನಿಲ,ಸಕ್ಕರೆ,ಸುವಾಸನೆವಸ್ತುಗಳು,ಬಾಟಲಿಹಾಗೂ ಸಾರಿಗೆ ವೆಚ್ಚ ಸಹಿತ ಕಚ್ಚಾವಸ್ತುಗಳ ಬೆಲೆ ದುಬಾರಿಯಾಗಿದ್ದು,ಹಳೇದರದಲ್ಲಿ ತಂಪುಪಾನೀಯಗಳನ್ನುಮಾರಾಟ ಮಾಡುತ್ತಿದ್ದರಿಂದ ಉದ್ಯಮವುನಷ್ಟದಲ್ಲಿ ನಡೆಯುತ್ತಿದೆ.ಏತನ್ಮಧ್ಯೆ,ಬಹುತೇಕಜಿಲ್ಲೆಗಳಲ್ಲಿ ಶೇ.50ರಷ್ಟುಸಣ್ಣ ಸೋಡಾ ಉತ್ಪಾದನಾ ಘಟಕಗಳುತಮ್ಮ ಉತ್ಪಾದನಾ ಕಾರ್ಯಾಚರಣೆಯನ್ನುಸ್ಥಗಿತಗೊಳಿಸಿದ್ದಾರೆ ಎಂದುಪಾನೀಯ ಉತ್ಪಾದನಾ ಸಮಿತಿ ಪದಾಧಿಕಾರಿಗಳುಮಾಹಿತಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಗಳಿಗೆಲಗ್ಗೆ ಇಟ್ಟಿರುವ ದೊಡ್ಡ ಬ್ರಾಂಡ್‌ಗಳಮಾಲಕತ್ವದ ಪ್ಲಾಸ್ಟಿಕ್ ಬಾಟಲಿಯಪಾನೀಯಗಳು ಮಾರುಕಟ್ಟೆಗಳನ್ನೆವ್ಯಾಪಿಸಿಕೊಂಡಿರುವುದು ಸಾಂಪ್ರದಾಯಿಕಸೋಡಾ ಉದ್ಯಮಕ್ಕೆ ಗಂಭೀರ ಹೊಡೆತನೀಡಿದೆ.ಗಾಜಿನಬಾಟಲಿಗಳಲ್ಲಿ ಸೋಡಾ ಮಾರುವವ್ಯಾಪಾರಿಗಳು ಸ್ಪರ್ಧೆ ನೀಡಲಾಗದೆನಷ್ಟ ಅನುಭವಿಸುತ್ತಿದ್ದು,ವ್ಯಾಪಾರದಲ್ಲಿಅವಕಾಶಗಳೇ ಇಲ್ಲದಂತಾಗುತ್ತಿವೆಎಂದು ವ್ಯಾಪಾರಿಗಳು ಆತಂಕವ್ಯಕ್ತಪಡಿಸಿದ್ದಾರೆ.
ಪರಿಷ್ಕರಿಸಿದದರಪಟ್ಟಿ ಪ್ರಕಾರ ತಲಾ ಸೋಡಾಬಾಕ್ಸ್‌ಗೆ 140ರೂ.ಮತ್ತುತಂಪು ಪಾನೀಯಗಳ ಬಾಕ್ಸ್‌ಗೆ 220ರೂ.ನಿಗದಿಪಡಿಸಲಾಗಿದೆ.ಚಿಲ್ಲರೆವ್ಯಾಪಾರದಲ್ಲಿ ಸೋಡಾದ ಬೆಲೆ 10ರೂ.ಮತ್ತುತಂಪು ಪಾನೀಯಗಳ ಬೆಲೆ 10ರೂ.ನಿಗದಿಪಡಿಸಲಾಗಿದೆ.ಹೊಸದರಪಟ್ಟಿ ಏ.2ರಿಂದಜಾರಿಗೊಳ್ಳಲಿದೆ ಎಂದು ಕೇರಳದಸೋಡಾ ಮತ್ತು ತಂಪು ಪಾನೀಯಗಳಉತ್ಪಾದಕರ ಸಂಘದ ಕಾಸರಗೋಡು ಜಿಲ್ಲಾಸಮಿತಿ ಮಾಹಿತಿ ನೀಡಿದೆ.
ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಬೆಲೆ ಏರಿಕೆ ಅನಿವಾರ್ಯ. ಕಚ್ಚಾ ವಸ್ತುಗಳ ಕೊರತೆಯೂ ಬಾಧಿಸಿದೆ. ನವೀನ ವಾದರಿಯ ಸೋಡಾ ಬಾಟಲಿ ಬಳಸದಿದ್ದರೆ ಸೋಡಾ ಸೇವಿಸುವವರನ್ನು ಆಕರ್ಷಿಸುವುದೂ ಕಷ್ಟ. ಬೃಹತ್ ಕಂಪೆನಿಗಳ ಪ್ಲಾಸ್ಟಿಕ್ ಬಾಟಲಿಗಳ ಮಧ್ಯೆ ಹೆಣಗಾಡುತ್ತಿರುವ ಸಾಂಪ್ರದಾಯಿಕ ಶೈಲಿಯ ಈ ಉದ್ಯಮ ಉಳಿಸಲು ಬೆಲೆ ಏರಿಕೆ ಅನಿವಾರ್ಯ.