

ಹಾಸ್ಟೆಲ್ನಲ್ಲಿರುವ ಒಂದು ಮಗುವಿಗೆ ವಸತಿ, ಊಟೋಪಹಾರ, ಸಾರಿಗೆ ಎಲ್ಲ ಸೇರಿ 10,200ರೂ. ಅನುದಾನ ಹಾಗೂ ಡೇ ಕೇರ್ ಮಗುವಿಗೆ 9 ಸಾವಿರ ರೂ. ನೀಡಲಾಗುತ್ತಿದೆ. ಸರ್ಕಾರ ಈಗ ನೀಡುತ್ತಿರುವ ಅನುದಾನದಲ್ಲಿ ವಿಶೇಷ ಶಾಲೆಗಳ ನಿರ್ವಹಣೆಗೂ ತೊಡಕಾಗಿದೆ. 7 ಮಗುವಿಗೆ ತಲಾ 1 ಶಿಕ್ಷಕರು ಇರಬೇಕು. ಆದರೆ, 13 ಮಕ್ಕಳಿದ್ದಲ್ಲಿ (1 ಮಗು ಕಡಿಮೆ ಇದ್ದರೆ) ಒಂದು ಶಿಕ್ಷಕರಿಗೆ ಕೆಲಸ ಇಲ್ಲದಾಗುತ್ತದೆ. ಹೀಗಾಗಿ ಕೆಲಸದ ಭದ್ರತೆಯೂ ಇಲ್ಲ. ವಿಶೇಷ ಮಕ್ಕಳ ಪಾಲನೆ ಸುಲಭವಲ್ಲ. ಇದು ತಿಳಿದೂ ಸಹ ಅತ್ಯಂತ ಕನಿಷ್ಠ ವೇತನ ನೀಡುತ್ತಿದ್ದಾರೆ. ನಮಗೂ ಸಾಮಾನ್ಯ ಶಿಕ್ಷರ ವೇತನ ನೀಡಬೇಕೆನ್ನುವುದು ಬೇಡಿಕೆಯಾಗಿದೆ.