ಸೃಜನಶೀಲ ಬರವಣಿಗೆಯಿಂದ ಕನ್ನಡದ ಅಸ್ಮಿತೆ ಉಳಿವು

 ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಸ್ನೇಹರಂಗದ ವಾರ್ಷಿಕ ಚಟುವಟಿಕೆಗಳನ್ನು ಕಾಲೇಜು ಉಪಪ್ರಾಂಶುಪಾಲೆ ಡಾ.ಮಿನಿ ಉದ್ಘಾಟಿಸಿದರು. ವಿಶಾಲಾಕ್ಷ ಪುತ್ರಕಳ, ಸುಜಾತಾ ಎಸ್. ಮೊದಲಾದವರಿದ್ದರು.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಸ್ನೇಹರಂಗದ ವಾರ್ಷಿಕ ಚಟುವಟಿಕೆಗಳನ್ನು ಕಾಲೇಜು ಉಪಪ್ರಾಂಶುಪಾಲೆ ಡಾ.ಮಿನಿ ಉದ್ಘಾಟಿಸಿದರು. ವಿಶಾಲಾಕ್ಷ ಪುತ್ರಕಳ, ಸುಜಾತಾ ಎಸ್. ಮೊದಲಾದವರಿದ್ದರು.
Published on

ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ವಿದ್ಯಾರ್ಥಿಗಳು ಸೃಜನಶೀಲ ಬರವಣಿಗೆಗಳ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸುವ ರಾಯಭಾರಿಗಳಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಹೇಳಿದರು.

ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೇದಿಕೆ ಸ್ನೇಹರಂಗದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಧ್ವನಿ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಕಾಲೇಜಿನ ಉಪಪ್ರಾಂಶುಪಾಲೆ ಡಾ.ಮಿನಿ ಪಿ.ವಿ. ಸಮಾರಂಭ ಉದ್ಘಾಟಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶಿವಶಂಕರ ಪಿ. ‘ಚಿಲುಮೆ’ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಿದರು.
ಕಾಲೇಜು ಕಚೇರಿ ಅಧೀಕ್ಷಕ ದಿನೇಶ ಕೆ.ಎಸ್. ಇದ್ದರು. ಡಾ.ಶ್ರೀಧರ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ವಿವೇಕ್ ಸ್ವಾಗತಿಸಿದರು. ಸ್ಫೂರ್ತಿ ಎಂ. ನಿರೂಪಿಸಿದರು. ಭರತ್ ಕೆ. ವಂದಿಸಿದರು. ‘ಕೃಷ್ಣಸಂಧಾನ’ ಯಕ್ಷಗಾನ ತಾಳಮದ್ದಳೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net