ಪರಂಪರೆ ಕಾಪಾಡುವುದು ಪ್ರತಿಯೊಬ್ಬನ ಹೊಣೆ

 ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಪ್ರಮುಖರಾದ ಉವಾನಾಥ ಕೋಟ್ಯಾನ್, ಯುವರಾಜ್ ಜೈನ್, ಮೌಲ್ಯ ಆರ್.ಜೈನ್ ಮತ್ತಿತರರಿದ್ದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಪ್ರಮುಖರಾದ ಉವಾನಾಥ ಕೋಟ್ಯಾನ್, ಯುವರಾಜ್ ಜೈನ್, ಮೌಲ್ಯ ಆರ್.ಜೈನ್ ಮತ್ತಿತರರಿದ್ದರು.
Published on

ಮೂಡುಬಿದಿರೆ: ಭಾರತ ವಿಶ್ವದ ಎಲ್ಲ ರಾಷ್ಟ್ರಗಳಿಗೂ ವಾರ್ಗದರ್ಶಕವಾಗಿರುವ ಶ್ರೇಷ್ಠ ದೇಶ. ದೇಶದ ಹಿರಿಮೆ, ಸಂಸ್ಕೃತಿ ಹಾಗೂ ಪರಂಪರೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಬೇಕು ಎಂದು ಶಾಸಕ ಉ

ಮಾ

ನಾಥ ಕೋಟ್ಯಾನ್ ಹೇಳಿದರು. ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ

ಮಾ

ತನಾಡಿದರು.

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಸಿತ ಭಾರತದ ಕನಸು ನನಸಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ಶಿಸ್ತು ಜೀವನ ಪದ್ಧತಿಯಾಗಬೇಕು. ವ್ಯಕ್ತಿಗಿಂತ ರಾಷ್ಟ್ರವೇ ಮುಖ್ಯ ಎಂಬ ಭಾವನೆ ಬೆಳೆದು ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಬೇಕು ಎಂದರು.
2026ನೇ ಸಾಲಿನ ಎನ್‌ಸಿಇಆರ್‌ಟಿ ಕಾಮನ್ ಎಂಟ್ರೆನ್ಸ್ ಎಕ್ಸಾಮಿನೇಷನ್‌ನಲ್ಲಿ ಅಖಿಲ ಭಾರತ 25ನೇ ರ‌್ಯಾಂಕ್ ಗಳಿಸಿದ ಎಕ್ಸಲೆಂಟ್ ಸಂಸ್ಥೆ ವಿದ್ಯಾರ್ಥಿನಿ ಮೌಲ್ಯ ಆರ್.ಜೈನ್ ಅವರನ್ನು ಗೌರವಿಸಲಾಯಿತು. ಎನ್.ಸಿ.ಸಿ. ಕ್ಷೇತ್ರದಲ್ಲಿ ಸಾಧನೆಗೈದ ತಸ್ಲೀಂ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪುಷ್ಪರಾಜ್ ಬಿ., ಉಪಪ್ರಾಂಶುಪಾಲ ಸುನಾದ್ ರಾಜ್ ಜೈನ್, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಜಯಶೀಲ್ ನಿರೂಪಿಸಿದರು. ಉಪನ್ಯಾಸಕಿ ವೈಷ್ಣವಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net