ನವಿಮುಂಬಯಿಯಲ್ಲಿ 53ನೇ ಚಾತುರ್ಮಾಸ್ಯ ಆಚರಣೆ

ನವಿಮುಂಬಯಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯಲ್ಲಿ ಸುಗುಣೇಂದ್ರ ಶ್ರೀಗಳ ಚಾತುರ್ಮಾಸ್ಯದ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ಶಿವರಾಮ್​ ಶೆಟ್ಟಿ ಅಜೆಕಾರ್​, ವಿದ್ವಾನ್​ ಪ್ರಹ್ಲಾದ್​ ಆಚಾರ್ಯ ನಾಗರಹಳ್ಳಿ, ಅಣ್ಣಿ ಶೆಟ್ಟಿ ಘಂನ್ಸೋಲಿ, ಎನ್​.ಆರ್​. ರಾವ್​ ಇದ್ದರು.
ನವಿಮುಂಬಯಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯಲ್ಲಿ ಸುಗುಣೇಂದ್ರ ಶ್ರೀಗಳ ಚಾತುರ್ಮಾಸ್ಯದ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ಶಿವರಾಮ್​ ಶೆಟ್ಟಿ ಅಜೆಕಾರ್​, ವಿದ್ವಾನ್​ ಪ್ರಹ್ಲಾದ್​ ಆಚಾರ್ಯ ನಾಗರಹಳ್ಳಿ, ಅಣ್ಣಿ ಶೆಟ್ಟಿ ಘಂನ್ಸೋಲಿ, ಎನ್​.ಆರ್​. ರಾವ್​ ಇದ್ದರು.
Published on

* ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪ

* ಪೂರ್ವಭಾವಿ ಸಮಾಲೋಚನಾ ಸಭೆ, ಸಮಿತಿ ರಚನೆ

ಉಡುಪಿ: ನಮ್ಮ ಸನ್ಯಾಸ ಜೀವನದಲ್ಲಿ 52 ಚಾತುರ್ಮಾಸ್ಯ ಪೂರ್ಣಗೊಂಡಿದ್ದು, ನವಿಮುಂಬಯಿಯಲ್ಲಿರುವ ಮಠದ ನೂತನ ಶಾಖೆಯಲ್ಲಿ 53ನೇ ವ್ರತ ಆಚರಿಸಲು ಸಂಕಲ್ಪ ಮಾಡಿದ್ದೇವೆ. ಈ ಹಿಂದೆ 7 ಚಾತುರ್ಮಾಸ್ಯ ಮುಂಬಯಿಯಲ್ಲಿ ಮಾಡಿದ್ದು, ಇದು 8ನೇ ಚಾತುರ್ಮಾಸ್ಯವಾಗಿದೆ. ಎಂಟು ಎನ್ನುವುದು ಶ್ರೀಕೃಷ್ಣನ ಸಂಖ್ಯೆ. ಹೀಗಾಗಿ ಮುಂಬಯಿಯಲ್ಲಿ ನಡೆಯಲಿರುವ ಈ ಚಾತುರ್ಮಾಸ್ಯ ವಿಶೇಷವಾಗಿದೆ. ನಮ್ಮ ವ್ರತಾಚರಣೆಗೆ ಎಲ್ಲ ಸದ್ಭಕ್ತರು ಸಹಕರಿಸಬೇಕು ಎಂದು ವಿಶ್ವಮಾನ್ಯ 'ಯತಿಕುಲ ಚಕ್ರವರ್ತಿ' ಬಿರುದಾಂಕಿತ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ನವಿಮುಂಬಯಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಚಾತುರ್ಮಾಸ್ಯದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಆ.10ರಂದು ಬೆಳಗ್ಗೆ ಉಡುಪಿ ಪುತ್ತಿಗೆಯಲ್ಲಿರುವ ಮೂಲ ಮಠದಲ್ಲಿ ಗುರುಗಳಿಗೆ ಪೂಜೆ ನೆರವೇರಿಸಿದ ಬಳಿಕ ಸಾಯಂಕಾಲ ಮುಂಬಯಿಯಲ್ಲಿ ಪುರಪ್ರವೇಶ ಮಾಡುತ್ತಿರುವುದಾಗಿ ಶ್ರೀಪಾದರು ತಿಳಿಸಿದರು. 

ಸಮಿತಿ ನೇಮಕ

ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾಗಿ ಶಿವರಾಮ್​ ಶೆಟ್ಟಿ ಅಜೆಕಾರ್​, ಗೌರವಾಧ್ಯಕ್ಷರಾಗಿ ವಿದ್ವಾನ್​ ಪ್ರಹ್ಲಾದ್​ ಆಚಾರ್ಯ ನಾಗರಹಳ್ಳಿ, ನಿವೃತ್ತ ನ್ಯಾಯಾಧೀಶ ದಿನೇಶ್​ ಕುಮಾರ್​, ಮುಂಬಯಿಯ ಪ್ರಸಿದ್ಧ ಗೋಕುಲದ ಅಧ್ಯಕ್ಷ ಡಾ ಸುರೇಶ್​ ರಾವ್​, ಸಿಎ ಎನ್​.ಆರ್​. ರಾವ್​ ಅವರನ್ನು ನೇಮಿಸಲಾಯಿತು.
ಉಪಾಧ್ಯಕ್ಷರಾಗಿ ಶ್ರೀಗಳ ಆಪ್ತರಾದ ಬಿ.ಆರ್​. ಶೆಟ್ಟಿ, ಅಣ್ಣಿ ಶೆಟ್ಟಿ ಘಂನ್ಸೋಲಿ, ಬಂಟ್ಸ್​ ಸಂಘದ ಅಧ್ಯಕ್ಷ ಪ್ರವಿಣ್​ ಭೋಜಶೆಟ್ಟಿ, ಸುರೇಶ್​ ಕಾಂಚನ್​, ಹರೀಶ್​ ಅಮೀನ್​, ಸೂರ್ಯಕಾಂತ್​ ನೇಮಕಗೊಂಡರು.
ಕಾರ್ಯಾಧ್ಯಕ್ಷರಾಗಿ ಕಳತ್ತೂರು ಗೋಪಾಲ್​ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ ದಿನೇಶ್​ ಕುಲಾಲ್​, ಸಹ ಕಾರ್ಯದರ್ಶಿಯಾಗಿ ವಿದ್ವಾನ್​ ರಾಘವೇಂದ್ರ ಜಮದಗ್ನಿ ಹಾಗೂ ವಿದ್ವಾನ್​ ಗುರುಪ್ರಸಾದ್​ ಘಂನ್ಸೋಲಿ ಆಯ್ಕೆಯಾದರು. ಖಜಾಂಚಿಯಾಗಿ ಸಂತೋಷ್​ ಸಿ. ಶೆಟ್ಟಿ, ಸಹ ಖಜಾಂಚಿಯಾಗಿ ಗುರುಪ್ರಸಾದ್​ ಚೆಂಬೂರು, ಪ್ರಧಾನ ಸಂಚಾಲಕರಾಗಿ ಸುಧೀರ್​ ಆರ್​.ಎಲ್​. ಶೆಟ್ಟಿ ನೇಮಕಗೊಂಡರು.
ಬೆಂಗಳೂರು ಗೋವರ್ಧನ ಕ್ಷೇತ್ರದ ಮೇಲ್ವಿಚಾರಕ ಎ.ಬಿ. ಕುಂಜಾರ್​ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ ಉಪಸ್ಥಿತರಿದ್ದರು.

ಆ.10ರಂದು ಪುರಪ್ರವೇಶ

ಸುಗುಣೇಂದ್ರ ಶ್ರೀಗಳು ಆ.12ರಂದು ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದು, ಆ.10ರಂದು ನವಿಮುಂಬಯಿಯಲ್ಲಿ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ. ಆ.15ರಂದು ನವಿಮುಂಬಯಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯ ಉದ್ಘಾಟನೆ ನೆರವೇರಲಿದೆ ಎಂದು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net