ಉಡುಪಿಯ ಐತಿಹಾಸಿಕ 'ಶಿವಪಾಡಿ ವೈಭವ' ಫೆ.14ರಿಂದ

ಉಡುಪಿಯ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಉದಯಕುಮಾರ್​ ಶೆಟ್ಟಿ ಮುನಿಯಾಲು ಉದ್ಘಾಟಿಸಿದರು. ಶ್ರೀನಿವಾಸ್​ ಪೂಜಾರಿ, ಪ್ರಕಾಶ್​ ಶೆಟ್ಟಿ, ಮಹೇಶ್​ ಠಾಕೂರ್​, ಸುರೇಂದ್ರ ನಾಯ್ಕ್​, ಎಸ್​.ದಿನೇಶ್​ ಪ್ರಭು ಇತರರಿದ್ದರು.
ಉಡುಪಿಯ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಉದಯಕುಮಾರ್​ ಶೆಟ್ಟಿ ಮುನಿಯಾಲು ಉದ್ಘಾಟಿಸಿದರು. ಶ್ರೀನಿವಾಸ್​ ಪೂಜಾರಿ, ಪ್ರಕಾಶ್​ ಶೆಟ್ಟಿ, ಮಹೇಶ್​ ಠಾಕೂರ್​, ಸುರೇಂದ್ರ ನಾಯ್ಕ್​, ಎಸ್​.ದಿನೇಶ್​ ಪ್ರಭು ಇತರರಿದ್ದರು.
Published on

* ಉಮಾಮಹೇಶ್ವರ ದೇಗುಲದಲ್ಲಿ ಪೂರ್ವಭಾವಿ ಸಭೆ

ಉಡುಪಿ: ಐತಿಹಾಸಿಕ ಶಿವಪಾಡಿ ವೈಭವ' ಕಾರ್ಯಕ್ರಮವನ್ನು ಫೆ.14 ಮತ್ತು ಫೆ.15ರಂದು  ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲು ಸಮಿತಿಯವರು ನಿರ್ಧರಿಸಿದ್ದಾರೆ.
ಮಣಿಪಾಲದ ಸರಳಬೆಟ್ಟು ಸಮೀಪದ ಶಿವಪಾಡಿಯಲ್ಲಿರುವ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರು ಈ ರ್ನಿಣಯ ಕೈಗೊಂಡರು. ಉದ್ಯಮಿ ಉದಯಕುಮಾರ್​ ಶೆಟ್ಟಿ ಮುನಿಯಾಲು ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ಬಬ್ಬು ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್​ ಪೂಜಾರಿ, ಮಣಿಪಾಲ ಪ.ಪೂ. ಕಾಲೇಜಿನ ಸಂಚಾಲಕ ಪ್ರಕಾಶ್​ ಶೆಟ್ಟಿ, ವಿಶ್ರಾಂತ ಪತ್ರಕರ್ತ ನಿತ್ಯಾನಂದ ಪಡ್ರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸುರೇಂದ್ರ ನಾಯ್ಕ್​, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್​ನ ಅಧ್ಯಕ್ಷ ಎಸ್​.ದಿನೇಶ್​ ಪ್ರಭು, ಆಡಳಿತ ಮೊಕ್ತೇಸರರಾದ ಮಹೇಶ್​ ಠಾಕೂರ್​ ಮತ್ತು ಸುಭಾಕರ್​ ಸಾಮಂತ್​, ಶಾಶ್ವತ ಟ್ರಸ್ಟಿ ದಿನೇಶ್​ ಎಸ್​. ಸಾಮಂತ, ಉಪಾಧ್ಯಕ್ಷ ಪುರುಷೋತ್ತಮ ಪ್ರಭು, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಜತೆ ಕಾರ್ಯದರ್ಶಿ ಅಶೋಕ್​ ಸಾಮಂತ್​, ಕೋಶಾಧಿಕಾರಿ ಶ್ರೀಕಾಂತ ಪ್ರಭು,ಟ್ರಸ್ಟಿಗಳಾದ ಪ್ರಕಾಶ್​ ಪ್ರಭು,  ಜಿ.ಕೃಷ್ಣರಾಯ ಪಾಟೀಲ್​, ಟ್ರಸ್ಟಿ ಮತ್ತು ಕೆಕೆಡಿಜಿಬಿ ವಿದ್ಯಾ ಪ್ರಸಾರಕ ಮಂಡಲದ ಅಧ್ಯಕ್ಷ ಸತೀಶ್​ ಪಾಟೀಲ್​, ಶಿವಪಾಡಿ ವೈಭವ ಆಚರಣಾ ಸಮಿತಿಯ ಕಾರ್ಯದರ್ಶಿ ಪ್ರಕಾಶ್​ ಕುಕ್ಕೆಹಳ್ಳಿ, ಮಾಹೆ ಎಸ್ಟೇಟ್​ ಆಫೀಸರ್​ ಬಾಲಕೃಷ್ಣ ಪ್ರಭು, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೇಷ್ಮಾ, ಕಲಾವಿದೆ ವಿದುಷಿ ಉಷಾ ಹೆಬ್ಬಾರ್​, ಅನಂತ ನಾಯ್ಕ್​ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net