ಸ್ವದೇಶಿ ಉತ್ಪನ್ನಗಳ ಮೇಳವನ್ನು ನಡೆಸುವ ಮುಖಾಂತರ ಸ್ಥಳೀಯ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಆದ್ಯತೆ ಕೊಡಬೇಕು. ಹಲಸು ಬರೀ ಬಾಯಿ ರುಚಿಯನ್ನು ವಾತ್ರ ನೀಡದೆ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುವಾರ್ ಹೇಳಿದರು.
ಕಾರ್ಕಳದ ದೀಪಂ ಮತ್ತು ನಮ್ಮ ಕಾರ್ಲ ಸಂಸ್ಥೆ ಪ್ರಾಯೋಜಕತ್ವದಲ್ಲಿ ಭಗವಾನ್ ಬಾಹುಬಲಿ ಪ್ರವಚನಾ ಮಂದಿರ ದಾನಶಾಲೆಯಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಹಲಸು, ವಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳವನ್ನು ಶನಿವಾರ ಉದ್ಘಾಟಿಸಿ ವಾತನಾಡಿದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಂಜುನಾಥ ಪೂಜಾರಿ ವಾತನಾಡಿ, ಮುಂದಿನ ಜನಾಂಗಕ್ಕೆ ಸ್ವದೇಶಿ ಉತ್ಪನ್ನಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರವಿ, ಶಶಿಕಲಾ ಕೆ.ಹೆಗ್ಡೆ ಹಾಗೂ ಆಸ್ಮಾ ಬಾನು ಅವರನ್ನು ಸನ್ಮಾನಿಸಲಾಯಿತು.
ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಸುಧಾಕರ್ ಶೆಟ್ಟಿ ಮತ್ತು ವಿಜಯ್ ಶೆಟ್ಟಿ, ವಂದನಾ ರೈ, ಕಾರ್ಯಕ್ರಮ ಪ್ರಾಯೋಜಕರಾದ ಸುಧಾ ಪ್ರಹ್ಲಾದ್ ಮತ್ತು ಅರ್ಚನಾ ವಿಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಶ್ವೇತಾ ಎಸ್.ಜೈನ್ ರೆಂಜಾಳ ನಿರೂಪಿಸಿದರು.