ಹನೆಹಳ್ಳಿ ಗ್ರಾಪಂನಿಂದ ಮಳೆಗಾಲ ಪೂರ್ವ ಸಿದ್ಧತೆ

ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿ ಮಳೆಗಾಲದ ಪೂರ್ವಸಿದ್ಧತೆಯಾಗಿ ಸ್ವಚ್ಛತಾ ಕಾರ್ಯ ನಡೆಯಿತು.
ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿ ಮಳೆಗಾಲದ ಪೂರ್ವಸಿದ್ಧತೆಯಾಗಿ ಸ್ವಚ್ಛತಾ ಕಾರ್ಯ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕೃತಕ ನೆರೆ ತಡೆಗೆ ಕ್ರಮ
  • ಗ್ರಾಪಂನೊಂದಿಗೆ ಸಹಕಾರಕ್ಕೆ ಮನವಿ
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿ ಮಳೆಗಾಲದ ಪೂರ್ವ ಸಿದ್ಧತೆಯಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಬದಿಯಲ್ಲಿ ಗ್ರಾಪಂ ಸ್ವಚ್ಛತಾ ಕರ್ಮಿಗಳು ಮತ್ತು ಸಿಬ್ಬಂದಿ ಪ್ಲಾಸ್ಟಿಕ್​ ಬ್ಯಾಗ್​ ಸೇರಿದಂತೆ ತ್ಯಾಜ್ಯ ಸಂಗ್ರಹಿಸಿ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ಘಟಕಕ್ಕೆ ಸಾಗಿಸಿದರು.

ಕೃತಕ ನೆರೆ ತಡೆಗೆ ಕ್ರಮ

ಗ್ರಾಪಂ ವ್ಯಾಪ್ತಿಯ ರಂಗನಕೆರೆ, ಬಾರಕೂರು ಕಾಲೇಜು ರಸ್ತೆ ಉದ್ದಾಲಗುಡ್ಡೆ, ಕೂರಾಡಿ ಬಂಡೀಮಠ ಸೇರಿದಂತೆ ರಸ್ತೆ ಬದಿಯ ಚರಂಡಿಯಲ್ಲಿ ತುಂಬಿರುವ ಕಸ ಕಡ್ಡಿ, ಗಿಡಗಂಟಿಗಳನ್ನು ಕಡಿದು ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಕೃತಕ ನೆರೆಯ ಕುರಿತು ಪೂರ್ವ ಸಿದ್ಧತೆ ಮಾಡಲಾಗಿದೆ.

ಗ್ರಾಪಂನೊಂದಿಗೆ ಸಹಕಾರಕ್ಕೆ ಮನವಿ

ಪ್ರತಿ ಮನೆಯವರು ತ್ಯಾಜ್ಯವನ್ನು ರಸ್ತೆ ಬದಿ ಎಸೆದು ಹೋಗುವ ಮನೋಭಾವ ಕಡಿಮೆ ಮಾಡಿ, ಗ್ರಾಪಂನವರು ವಾಹನದೊಂದಿಗೆ ಮನೆ ಮನೆಗೆ ಬರುವಾಗ ತ್ಯಾಜ್ಯವನ್ನು ಹಸ್ತಾಂತರಿಸಬೇಕಿದೆ. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಗ್ರಾಪಂನೊಂದಿಗೆ ಸಹಕರಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಪ್ರಭಾಶಂಕರ ಪುರಾಣಿಕ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net