ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಶಾಸಕ ಕಲ್ಲಟ್ರ ಮಾಹಿನ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲ ಕುಂಞಿ, ಬದಿಯಡ್ಕ ಗ್ರಾಪಂ ಅಧ್ಯಕ್ಷ ಶಂಕರ ಡಿ., ಜಿಪಂ ಸದಸ್ಯರಾದ ರಾಮಪ್ಪ ಮಂಜೇಶ್ವರ, ಸೋಮಶೇಖರ ಜೆ.ಎಸ್., ಹಿರಿಯ ನೇತಾರ ಕುಂಟಾರು ರವೀಶ ತಂತ್ರಿ, ಜನಪ್ರತಿನಿಧಿಗಳಾದ ಮಾಹಿನ್ ಕೇಳೋಟ್, ಶ್ಯಾಮ್‌ಪ್ರಸಾದ್ ಮಾನ್ಯ, ಎಂ.ಎಸ್.ಮೊಯ್ದೀನ್, ಬಾಲಕೃಷ್ಣ ಶೆಟ್ಟಿ, ಅಶ್ವಿನಿ ಮೊಳೆಯಾರ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕಾಧ್ಯಕ್ಷ ಡಾ.ಮಲ್ಲಿಕಾರ್ಜುನ ನಾಸಿ ಕೊಚ್ಚಿನ್, ಕಯ್ಯರರ ಹಿರಿಯ ಪುತ್ರ ದುರ್ಗಾಪ್ರಸಾದ್ ರೈ, ಡಾ.ಪ್ರಸನ್ನ ರೈ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಎಂ.ಎಸ್.ಮದಬಾವಿ, ಭಗತ್ ರಾಜ್ ನಿಜಾಂಕರಿ, ಡಾ.ಸಂಜೀವ ಕುಮಾರ, ಶಿವರೆಡ್ಡಿ ಖ್ವಾದೇಡ ಉಪಸ್ಥಿತರಿದ್ದರು. ಕನ್ನಡ ಭವನದ ಉದ್ಘಾಟನೆ ಸಂಬಂಧ ಸಮಿತಿ ರಚಿಸಲಾಯಿತು.