ಭಾರತೀಯ ಜ್ಞಾನ ರಕ್ಷಣೆ ನಮ್ಮೆಲ್ಲರ ಹೊಣೆ

ಉಡುಪಿಯ ಶ್ರೀಮನ್​ ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ 'ಪ್ರತಿಭಾ ಪ್ರದೀಪಿನೀ' ಕಾರ್ಯಕ್ರಮದಲ್ಲಿ ಡಾ. ಬಿ.ಗೋಪಾಲ್​ ಆಚಾರ್ಯ ಮಾತನಾಡಿದರು. ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ, ಪ್ರೊ. ಸತ್ಯನಾರಾಯಣ ವಿ. ರಾವ್​ ಇದ್ದರು.
ಉಡುಪಿಯ ಶ್ರೀಮನ್​ ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ 'ಪ್ರತಿಭಾ ಪ್ರದೀಪಿನೀ' ಕಾರ್ಯಕ್ರಮದಲ್ಲಿ ಡಾ. ಬಿ.ಗೋಪಾಲ್​ ಆಚಾರ್ಯ ಮಾತನಾಡಿದರು. ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ, ಪ್ರೊ. ಸತ್ಯನಾರಾಯಣ ವಿ. ರಾವ್​ ಇದ್ದರು.
Published on

ವಿದ್ವಾನ್ ಡಾ. ಬಿ.ಗೋಪಾಲ್​ ಆಚಾರ್ಯ ಅಭಿಮತ

* 'ಪ್ರತಿಭಾ ಪ್ರದೀಪಿನೀ' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಭಾರತದ ಜ್ಞಾನ ಭಂಡಾರವು ಹಿರಿಯರ ಕಠಿಣ ಪರಿಶ್ರಮದ ಪ್ರತೀಕ. ತಾಡವಾಲೆಯ ಮೂಲಕ ನಮ್ಮ ಪೀಳಿಗೆಗೆ ಭಾರತೀಯ ಪ್ರಾಚೀನ ಜ್ಞಾನ ಲಭಿಸಿದೆ. ಪ್ರಯತ್ನಪೂರ್ವಕವಾಗಿ ಅವುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಮಹತ್ತರ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಸರ್ಕಾರದ 'ಜ್ಞಾನ ಭಾರತೀ ಮಿಷನ್​'ನ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ವಿದ್ವಾನ್ ಡಾ. ಬಿ.ಗೋಪಾಲ್​ ಆಚಾರ್ಯ ಅಭಿಮತ ವ್ಯಕ್ತಪಡಿಸಿದರು.
ಉಡುಪಿ ರಥಬೀದಿಯಲ್ಲಿರುವ ಪುತ್ತಿಗೆ ಮಠದಲ್ಲಿರುವ ಶ್ರೀಮನ್​ ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ 'ಪ್ರತಿಭಾ ಪ್ರದೀಪಿನೀ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಠ್ಯೇತರವೂ ಪ್ರಮುಖ

ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ ಮಾತನಾಡಿ, ನಾವೆಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಹೀಗಾಗಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕಿದೆ ಎಂದರು. ಅಲ್ಲದೆ, ವ್ಯುತ್ಪತ್ತಿ ಮತ್ತು ಪ್ರತಿಭೆಯ ಸ್ವರೂಪ ತಿಳಿಸಿದರು.
ಪ್ರೊ. ಸತ್ಯನಾರಾಯಣ ವಿ. ರಾವ್​ ಉಪಸ್ಥಿತರಿದ್ದರು. ಪ್ರಹ್ಲಾದ್​ ಸ್ವಾಗತಿಸಿದರು. ಚಿದಾನಂದ ನಾಯಕ್​ ವಂದಿಸಿದರು. ಹೇಮಂತಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
"

ಜಗತ್ತಿನ ಬಹುತೇಕ ಎಲ್ಲ ಜ್ಞಾನಗಳಿಗೆ ಭಾರತವೇ ಮೂಲವಾಗಿದೆ. ನಾವೆಲ್ಲ ಭಾರತೀಯ ಜ್ಞಾನ ಉಳಿಸಿಲು ಮುಂದಾಗೋಣ. ತಾಡವಾಲೆಯಲ್ಲಿ ನಮ್ಮ ದೇಶದ ಪ್ರಾಚೀನ ಗ್ರಂಥಗಳಿದ್ದು, ಅವುಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಣೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ 'ಜ್ಞಾನ ಭಾರತೀ ಮಿಷನ್​' ಕಾರ್ಯ ನಿರ್ವಹಿಸುತ್ತಿದೆ.

— ಡಾ. ಬಿ.ಗೋಪಾಲ್​ ಆಚಾರ್ಯ. ಜ್ಞಾನ ಭಾರತೀ ಮಿಷನ್​ನ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net