ವಾರ್ಷಿಕ ಸಂಚಿಕೆಯಿಂದ ಬರವಣಿಗೆಗೆ ಅವಕಾಶ

ಉಡುಪಿ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನಲ್ಲಿ 'ಪ್ರಾಂಜಲ' ವಾರ್ಷಿಕ ಸಂಚಿಕೆಯನ್ನು ರವೀಂದ್ರ ಉಪಾಧ್ಯಾಯ ಬಿಡುಗಡೆಗೊಳಿಸಿದರು. ಡಾ. ಎ.ಪಿ. ಭಟ್​, ರಮೇಶ್​ ಹಂದೆ, ಸಿ. ಸುರೇಶ್​ ತುಂಗ, ರಮಾನಂದ ರಾವ್​ ಇದ್ದರು.
ಉಡುಪಿ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನಲ್ಲಿ 'ಪ್ರಾಂಜಲ' ವಾರ್ಷಿಕ ಸಂಚಿಕೆಯನ್ನು ರವೀಂದ್ರ ಉಪಾಧ್ಯಾಯ ಬಿಡುಗಡೆಗೊಳಿಸಿದರು. ಡಾ. ಎ.ಪಿ. ಭಟ್​, ರಮೇಶ್​ ಹಂದೆ, ಸಿ. ಸುರೇಶ್​ ತುಂಗ, ರಮಾನಂದ ರಾವ್​ ಇದ್ದರು.
Published on

* ಡಿಡಿಪಿಯು ರವೀಂದ್ರ ಉಪಾಧ್ಯಾಯ ಅನಿಸಿಕೆ

* ಪಿಪಿಸಿಯಲ್ಲಿ 'ಪ್ರಾಂಜಲ' ಸಂಚಿಕೆ ಬಿಡುಗಡೆ

ಉಡುಪಿ: ಶಾಲಾ-ಕಾಲೇಜುಗಳಲ್ಲಿ ಪ್ರತಿವರ್ಷ ರಚಿಸುವ ವಾರ್ಷಿಕ ಸಂಚಿಕೆಯು ಶೈಕ್ಷಣಿಕ ಸಾಧನೆಯ ದಾಖಲೆಯಾಗಿದೆ. ಸಾಂಸ್ಕೃತಿಕ, ಕ್ರೀಡಾ ಸಾಧನೆಗಳ ಜತೆಗೆ ವಿದ್ಯಾರ್ಥಿಗಳಿಗೆ ಆರಂಭದ ಬರವಣಿಗೆಗೆ ಈ ಸಂಚಿಕೆ ಅವಕಾಶ ಕಲ್ಪಿಸುತ್ತದೆ. ತಮ್ಮ ಚಟುವಟಿಕೆಗಳನ್ನು ಮತ್ತೆ ಮತ್ತೆ ನೆನಪು ಕಾಣಲು ಸಂಚಿಕೆಗಳು ಸಾಧನವಾಗಿದೆ ಎಂದು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪ.ಪೂ.)ಯ ಉಪನಿರ್ದೇಶಕ ರವೀಂದ್ರ ಉಪಾಧ್ಯಾಯ ಹೇಳಿದರು.
ಉಡುಪಿ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನ 2025-26ನೇ ಸಾಲಿನ ವಾರ್ಷಿಕ ಸಂಚಿಕೆ 'ಪ್ರಾಂಜಲ' ಬಿಡುಗಡೆಗೊಳಿಸಿ ಮಾತನಾಡಿ, ಇದು ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ರಮೇಶ್​ ಹಂದೆ ಮಾತನಾಡಿದರು. ಪ್ರಾಂಶುಪಾಲ ಸಿ. ಸುರೇಶ್​ ತುಂಗ ಅಧ್ಯಕ್ಷತೆ ವಹಿಸಿದ್ದರು.
ನಿಧಿ ಮತ್ತು ಮೇದಿನಿ ಸ್ವಾಗತ ಗೀತೆ ಹಾಡಿದರು. ಪ್ರಾಂಜಲ ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕ ರಮಾನಂದ ರಾವ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪಾದಕಿ ಶ್ರೀದೇವಿ ಬಾಳಿಗಾ ಕಾರ್ಯಕ್ರಮ ನಿರೂಪಿಸಿದರು. ಪ್ರತಿಮಾ ಬಾಳಿಗಾ ವಂದಿಸಿದರು.
"

ವಾರ್ಷಿಕ ಸಂಚಿಕೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬ. ಓದುವ ಹವ್ಯಾಸದಿಂದ ಬರೆಯಲು ಸಾಧ್ಯ. ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ತಮ್ಮ ಸಚಿತ್ರ ಮಾಹಿತಿ ಬರುವಂತಾಗಲು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಸಾಧನೆ ಮಾಡಬೇಕು.

— ಡಾ. ಎ.ಪಿ. ಭಟ್​. ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net