ಕೋಳಿ ಸಾಕಾಣೆಯಿಂದ ರೈತರ ಆರ್ಥಿಕ ಮಟ್ಟ ಹೆಚ್ಚಳ

 ತರಬೇತಿ ಪಡೆದ ಫಲಾನುಭವಿಗಳಿಗೆ ಕೋಳಿ ಮರಿಗಳ ಜತೆಗೆ ಅವುಗಳಿಗೆ ಆಹಾರ ನೀಡುವ ಪಾತ್ರೆ, ನೀರುಣಿಕೆ, ಕೋಳಿಗಳ ತಿಂಡಿ ಮಿಶ್ರಣ ವಿತರಿಸಲಾಯಿತು. ಪ್ರಮುಖರಾದ ಡಾ.ಶಿವಕುಮಾರ್, ಡಾ.ಮಂಜುನಾಥ ಪಾಟೀಲ್, ಡಾ.ಅರುಣ್ ಸೋಮಗೊಂಡ ಮತ್ತಿತರರಿದ್ದರು.
ತರಬೇತಿ ಪಡೆದ ಫಲಾನುಭವಿಗಳಿಗೆ ಕೋಳಿ ಮರಿಗಳ ಜತೆಗೆ ಅವುಗಳಿಗೆ ಆಹಾರ ನೀಡುವ ಪಾತ್ರೆ, ನೀರುಣಿಕೆ, ಕೋಳಿಗಳ ತಿಂಡಿ ಮಿಶ್ರಣ ವಿತರಿಸಲಾಯಿತು. ಪ್ರಮುಖರಾದ ಡಾ.ಶಿವಕುಮಾರ್, ಡಾ.ಮಂಜುನಾಥ ಪಾಟೀಲ್, ಡಾ.ಅರುಣ್ ಸೋಮಗೊಂಡ ಮತ್ತಿತರರಿದ್ದರು.
Published on
ಕಡಬ: ರೈತರ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಸರ್ವತೋಮುಖ ಬೆಳವಣಿಗೆಗಾಗಿ ಸುಧಾರಿತ ಕೋಳಿ ಸಾಕಾಣಿಕೆ ಮಾಡುವುದು ಅತ್ಯವಶ್ಯ, ರೈತರ ಆದಾಯ ದ್ವಿಗುಣವಾಗಲು ಇದೊಂದು ಒಳ್ಳೆಯ ಉಪ ಕಸುಬು ಎಂದು ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿ.ವಿ. ಬೀದರ್ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಹೇಳಿದರು.
ಕೊಲ ಪಶು ವೈದ್ಯಕೀಯ ಕಾಲೇಜು, ಎಐಪಿಆರ್‌ಪಿ ಕುಕ್ಕುಟ ಸಂವರ್ಧನೆ, ಕುಕ್ಕುಟ ವಿಜ್ಞಾನ ವಿಭಾಗ ಪಶು ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು ಆಶ್ರಯದಲ್ಲಿ ಎಸ್‌ಸಿಎಸ್‌ಡಿ ಯೋಜನೆಯಡಿಯಲ್ಲಿ ಸುಧಾರಿತ ಕೋಳಿ ಸಾಕಾಣಿಕೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೊಲ ಪಶು ವೈದ್ಯಕೀಯ ಮಹಾ ವಿದ್ಯಾಲಯ ಡೀನ್ ಡಾ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ.ಮಂಜುನಾಥ ಪಾಟೀಲ್, ಸಹ ಪ್ರಾಧ್ಯಾಪಕರಾದ ಡಾ.ಅರುಣ್ ಸೋಮಗೊಂಡ, ಡಾ.ರಶ್ಮಿ, ಡಾ.ಹರಿಣಿ, ಡಾ.ಧರಣೇಶ್, ಡಾ.ರಜತ್ ಸಾಗರ್ ತರಬೇತಿ ನೀಡಿದರು.
ಕೊಲ, ರಾಮಕುಂಜ, ಹಳೆನೇರೆಂಕಿ ಗ್ರಾಮದ 35 ರೈತರು, ರೈತ ಮಹಿಳೆಯರು ಹಾಗೂ ಗ್ರಾಮೀಣ ಯುವಕರು ತರಬೇತಿ ಪಡೆದರು. ಫಲಾನುಭವಿಗಳಿಗೆ ಕೋಳಿಮರಿಗಳ ಜತೆಗೆ ಅವುಗಳಿಗೆ ಆಹಾರ ನೀಡುವ ಪಾತ್ರೆ, ನೀರುಣಿಕೆ, ಕೋಳಿಗಳ ತಿಂಡಿ ಮಿಶ್ರಣ ವಿತರಿಸಲಾಯಿತು. ಡಾ.ತೇಜಸ್ವಿನಿ ಸ್ವಾಗತಿಸಿದರು. ಡಾ.ಸಾಗರ್ ಆರ್.ಎಸ್. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net