ಹೊಂಡಗುಂಡಿಗಳಿಂದ ಸಂಚಾರ ದುಸ್ತರ

 ಉಡುಪಿ- ಬ್ರಹ್ಮಾವರ- ಬಾರಕೂರು- ಶಿವಮೊಗ್ಗ ರಾಜ್ಯ ರಸ್ತೆಯಲ್ಲಿ ಹೊಂಡಗುಂಡಿಗಳಾಗಿರುವುದು.
ಉಡುಪಿ- ಬ್ರಹ್ಮಾವರ- ಬಾರಕೂರು- ಶಿವಮೊಗ್ಗ ರಾಜ್ಯ ರಸ್ತೆಯಲ್ಲಿ ಹೊಂಡಗುಂಡಿಗಳಾಗಿರುವುದು.
Published on

ಬ್ರಹ್ಮಾವರ:

ಉಡುಪಿ- ಬ್ರಹ್ಮಾವರ- ಬಾರಕೂರು- ಶಿವಮೊಗ್ಗ ರಾಜ್ಯ ರಸ್ತೆಯಲ್ಲಿ ಹೊಂಡಗುಂಡಿಗಳಿದ್ದು, ಸಂಚಾರ ತೀರಾ ಕಷ್ಟಕರವಾಗಿದೆ.

ಹಂದಾಡಿ ದುರ್ಗಾ ಸಭಾಗೃಹ ಮತ್ತು ಬಾರಕೂರು ಸೇತುವೆ ಬಳಿ ಬೃಹತ್ ಹೊಂಡಗಳಿಂದಾಗಿ ಸಂಚಾರ ದುಸ್ತರವಾಗಿದೆ. ಹಗಲಿನಲ್ಲಿ ಗುಂಡಿ ತಪ್ಪಿಸಿಕೊಂಡು ಸಂಚರಿಸಬಹುದು. ಆದರೆ ರಾತ್ರಿ ಮತ್ತು ಮಳೆ ಬಂದು ನೀರು ತುಂಬಿಕೊಂಡರೆ ಹೊಂಡಗಳು ಕಾಣದೆ ಅನೇಕರು ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ಸಂಭವಿಸಿವೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಶಾಲೆ ಬಸ್‌ಗಳು, ಆಟೋಗಳು, ಬಸ್, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಅಧಿಕ ಭಾರದ ವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರ ನಿಷೇಧವಿದ್ದರೂ ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನದಲ್ಲಿ ಟೋಲ್ ಹಣ ನೀಡಬೇಕಾಗುತ್ತದೆ ಎಂಬ ಕಾರಣದಿಂದ ಅಧಿಕ ಭಾರದ ಲಾರಿಗಳು ಸಂಚರಿಸುತ್ತಿವೆ. ಇದರಿಂದಾಗಿ ಈ ರಸ್ತೆಯಲ್ಲಿ ಇನ್ನಷ್ಟು ಹೊಂಡಗುಂಡಿಗಳಾಗಿವೆ. ಅಧಿಕ ಭಾರದ ಲಾರಿಗಳ ಸಂಚಾರ ನಿಷೇಧಿಸುವಂತೆ ಹಾಗೂ ಗುಂಡಿಗಳನ್ನು ಮುಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಾರಕೂರು ವಾರ್ಗದ ರಸ್ತೆಯಲ್ಲಿ ಅಧಿಕ ಭಾರದ ಲಾರಿಗಳ ಸಂಚಾರದಿಂದ ಪ್ರತಿ ವರ್ಷ ಅಲ್ಲಲ್ಲಿ ಗುಂಡಿಗಳು ಉಂಟಾಗುತ್ತವೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆಗೆ ಗುಂಡಿಗಳಿಗೆ ಜಲ್ಲಿ ಹಾಕಲಾಗುತ್ತದೆ. ಜೋರು ಮಳೆ ಬಂದಾಗ ಅವುಗಳು ಕೊಚ್ಚಿ ಹೋಗಿ ಗುಂಡಿಗಳಾಗುತ್ತವೆ. ಹೆದ್ದಾರಿ ಕಾಮಗಾರಿಯವರು ಈ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು.

— ರಾಜು ಪೂಜಾರಿ, ಗೌರವಾಧ್ಯಕ್ಷ, ಬ್ರಹ್ಮಾವರ ಅಟೋ ಯೂನಿಯನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net