ಪ್ರಾಚೀನ ವಸ್ತುಗಳ ಮಹತ್ವ, ಮೌಲ್ಯ ಕಡಿಮೆಯಾಗದು

ಉಡುಪಿಯ ವಿದ್ಯೋದಯ ಶಾಲೆಯಲ್ಲಿ ಆಯೋಜಿಸಿದ್ದ ಅಂಚೆ ಚೀಟಿ, ನಾಣ್ಯ ಪ್ರದರ್ಶನವನ್ನು ವಿದ್ಯಾವಲ್ಲಭ ಶ್ರೀ ಉದ್ಘಾಟಿಸಿದರು. ರಮೇಶ್​ ಪ್ರಭು, ಸಿ.ಎನ್​. ನಾಗರಾಜ್​ ಬಲ್ಲಾಳ್​, ಡಾ. ಕಿರಣ್​ ಆಚಾರ್ಯ, ಯು. ಪದ್ಮರಾಜ ಆಚಾರ್ಯ, ಮರಕಡ ಪ್ರಭಾಕರ ಕಾಮತ್​, ಡಾ. ಬಿ.ಜಗದೀಶ್​ ಶೆಟ್ಟಿ, ಅನಿತಾ ಪಿ. ರಾಜ್​, ಮೇಘನಾ ಇದ್ದರು.
ಉಡುಪಿಯ ವಿದ್ಯೋದಯ ಶಾಲೆಯಲ್ಲಿ ಆಯೋಜಿಸಿದ್ದ ಅಂಚೆ ಚೀಟಿ, ನಾಣ್ಯ ಪ್ರದರ್ಶನವನ್ನು ವಿದ್ಯಾವಲ್ಲಭ ಶ್ರೀ ಉದ್ಘಾಟಿಸಿದರು. ರಮೇಶ್​ ಪ್ರಭು, ಸಿ.ಎನ್​. ನಾಗರಾಜ್​ ಬಲ್ಲಾಳ್​, ಡಾ. ಕಿರಣ್​ ಆಚಾರ್ಯ, ಯು. ಪದ್ಮರಾಜ ಆಚಾರ್ಯ, ಮರಕಡ ಪ್ರಭಾಕರ ಕಾಮತ್​, ಡಾ. ಬಿ.ಜಗದೀಶ್​ ಶೆಟ್ಟಿ, ಅನಿತಾ ಪಿ. ರಾಜ್​, ಮೇಘನಾ ಇದ್ದರು.
Published on

* ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀ ಆಶೀರ್ವಚನ

* ಅಂಚೆ ಚೀಟಿ, ನಾಣ್ಯ ಪ್ರದರ್ಶನ ಉದ್ಘಾಟನೆ

ಉಡುಪಿ: ಕಾಲ ಬದಲಾಗುವಂತೆ ಚಲಾವಣೆಯಲ್ಲಿರುವ ವಸ್ತುಗಳೂ ದೂರವಾಗುತ್ತವೆ. ಅವುಗಳು ಹಳತು ಎಂಬ ಕಾರಣಕ್ಕೆ ಪ್ರಾಚೀನ ವಸ್ತುವಾಗಿ ಮರೆಯಾಗುತ್ತವೆ. ಆದರೆ, ಅವುಗಳ ಮಹತ್ವ, ಮೌಲ್ಯ ಎಂದಿಗೂ ಕಡಿಮೆಯಾಗದು ಎಂಬ ಸತ್ಯ ಅರಿಯಬೇಕು. ಪಠ್ಯೇತರ ಚಟುವಟಿಕೆಯೊಂದಿಗೆ ಮಕ್ಕಳು ಏನಾದರೊಂದು ಉತ್ತಮ ಹವ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ ಎಂದು ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ವಿದ್ಯೋದಯ ಪಬ್ಲಿಕ್​ ಸ್ಕೂಲ್​ನಲ್ಲಿ ಮಂಗಳೂರಿನ ದಕ್ಷಿಣ ಕನ್ನಡ ಫಿಲಾಟಲಿಕ್​ ಮತ್ತು ನ್ಯುಮಿಸ್ಮಾಟಿಕ್​ ಅಸೋಸಿಯೇಷನ್​ನ 50ನೇ ವರ್ಷಾಚರಣೆ ಮತ್ತು ಮಣಿಪಾಲ ಫಿಲಾಟಲಿ ಮತ್ತು ನ್ಯುಮಿಸ್ಮಾಟಿಕ್​ ಕ್ಲಬ್​ನ ದಶಮ ವರ್ಷ ಸಂಭ್ರಮದ ನಿಮಿತ್ತ ಶನಿವಾರ (ಜ.31) ಆಯೋಜಿಸಿದ್ದ ಅಂಚೆ ಚೀಟಿ, ನಾಣ್ಯ ಪ್ರದರ್ಶನದ 'ವಿದ್ಯೋದಯ ಪೆಕ್ಸ್​-2026' ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಕ್ಕಳಿಗೆ ಸಂಸ್ಕೃತಿಯ ಅರಿವು
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಮೇಶ್​ ಪ್ರಭು ಮಾತನಾಡಿ, ಯಾವುದೇ ಪ್ರಕಾರದ ಉತ್ತಮ ಹವ್ಯಾಸಗಳಿಂದ ಜ್ಞಾನ ಹಾಗೂ ಸಂಸ್ಕೃತಿಯ ವಿಶೇಷತೆ ಅರಿತುಕೊಳ್ಳಲು ಸಾಧ್ಯ. ಇಂದಿನ ಮಕ್ಕಳು ಮೊಬೈಲ್​ ಗೀಳಿಗೆ ಬಲಿಯಾಗುತ್ತಿದ್ದು ಅದರಿಂದ ಪಾರಾಗಲು ಒಂದೆರಡು ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯೋದಯ ಪಬ್ಲಿಕ್​ ಸ್ಕೂಲ್​ನ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಎನ್​. ನಾಗರಾಜ್​ ಬಲ್ಲಾಳ್​ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಫಿಲಾಟಲಿ ಮತ್ತು ನ್ಯುಮಿಸ್ಮಾಟಿಕ್​ ಕ್ಲಬ್​ನ ಅಧ್ಯಕ್ಷ ಡಾ. ಕಿರಣ್​ ಆಚಾರ್ಯ, ಯು. ಪದ್ಮರಾಜ ಆಚಾರ್ಯ, ಮರಕಡ ಪ್ರಭಾಕರ ಕಾಮತ್​, ಡಾ. ಬಿ.ಜಗದೀಶ್​ ಶೆಟ್ಟಿ, ವಿದ್ಯೋದಯ ಪ್ರೌಢಶಾಲೆಯ ಪ್ರಾಂಶುಪಾಲೆ ಅನಿತಾ ಪಿ. ರಾಜ್​ ಉಪಸ್ಥಿತರಿದ್ದರು.
ಮೇಘನಾ ಸ್ವಾಗತಿಸಿದರು. ಸಕು ಕಾರ್ಯಕ್ರಮ ನಿರೂಪಿಸಿದರು. ವಿದ್ಯೋದಯ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸಂದೀಪಕುಮಾರ್​ ವಂದಿಸಿದರು.
"

ತೆರೆಮರೆಗೆ ಸರಿಯುತ್ತಿರುವ ಪ್ರಾಚೀನ ವಸ್ತುಗಳ ಇಂತಹ ಪ್ರದರ್ಶನದಿಂದ ಅವುಗಳನ್ನು ಸಂಗ್ರಹಿಸುವ ಅಭಿರುಚಿ, ಹವ್ಯಾಸ ಹೆಚ್ಚುತ್ತದೆ. ಪ್ರಾಚೀನ ವಸ್ತುಗಳನ್ನು ಕಂಡಾಗ ಇಂದಿನ ಯುವ ಸಮುದಾಯಕ್ಕೆ ಹಿಂದಿನವರ ಜೀವನ ಹೇಗಿತ್ತೆಂದು ಅರಿಯಲು ಸಾಧ್ಯವಾಗುತ್ತದೆ. ಹಳೆಯ ವಸ್ತುವೆಂದು ಗುಜರಿಗೆ ಹಾಕುವುದು ಸರಿಯಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net