ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ನೆರವು
ನೆರವು
Published on
ಬ್ರಹ್ಮಾವರ: ಬ್ರಹ್ಮಾವರದ ಚೇರ್ಕಾಡಿ ಪ್ರಗತಿ ನಗರದ ಬಡ ಕುಟುಂಬದ ಉಷಾ ಮತ್ತು ಅಣ್ಣಪ್ಪ ದಂಪತಿ ಮಗು ಈಶಾನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಕಳೆದ ವರ್ಷ ಜೂನ್ 28ರಂದು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಗು ಹುಟ್ಟಿದ 6ನೇ ದಿನದಿಂದ ಇಲ್ಲಿವರೆಗೂ ಆಸ್ಪತ್ರೆಯಲ್ಲೇ ಇದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಹೋದಾಗ ಮಗು ತೀರಾ ಅಸ್ವಸ್ಥಗೊಂಡ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಮಗುವಿಗೆ ಹೃದಯ ಸಂಬಂಧಿ ತೊಂದರೆ ಇರುವುದು ಪತ್ತೆಯಾಗಿದೆ. ಬಳಿಕ ಉಡುಪಿ ಜಿಲ್ಲಾ ಆಸ್ಪತ್ರೆ ಬಳಿಕ ಮಂಗಳೂರು ಜಿಲ್ಲಾ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ತಿಂಗಳ ಕಾಲ ನಿರಂತರ ಚಿಕಿತ್ಸೆ ನೀಡಲಾಗಿತ್ತು.
ಅಲ್ಲಿ ಕೂಡ ಚಿಕಿತ್ಸೆ ಫಲಕಾರಿಯಾಗದ ಕಾರಣ ಇದೀಗ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆಯಿಂದ ಗುಣವಾಗುವ ಭರವಸೆ ನೀಡಲಾಗಿದ್ದು, ಚಿಕಿತ್ಸೆಗೆ 6 ಲಕ್ಷ ರೂ. ಬೇಕಾದ ಕಾರಣ ಕೂಲಿ ಕಾರ್ಮಿಕರಾಗಿರುವ ಬಡ ದಂಪತಿ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ನೆರವು ಯಾಚಿಸಿದ್ದಾರೆ. ಆರ್ಥಿಕ ನೆರವು ನೀಡಲಿಚ್ಛಿಸುವವರು ಪೇತ್ರಿ ಕೆನರಾ ಬ್ಯಾಂಕ್‌ನ ಉಳಿತಾಯ ಖಾತೆ ಸಂಖ್ಯೆ: 81812210010210. ಐಎ್ಎಸ್‌ಸಿ ಕೋಡ್: ಸಿಎನ್‌ಆರ್‌ಬಿ 0010181ಗೆ ನೆರವು ನೀಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net