ಮಣಿಪಾಲದ ಎಕ್ಸ್ಟಸಿ ಪಬ್, ಮಣಿಪಾಲದ ಡೌನ್ ದಿ ರೋಡ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಡೆಕ್ಸರ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಈಶ್ವರನಗರದ ಸಾಯಿ ಸಾಗರ್ ಬಾರ್ ಮತ್ತು ರೆಸ್ಟೋರೆಂಟ್, ಡಿ.ಟಿ ಬಾರ್ ಆ್ಯಂಡ್ ರೆಸ್ಟೋರೆಂಟ್, ಜನನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದು, ಈ ವೇಳೆ ನಿಯಮ ಮೀರಿ ಮದ್ಯ ಸೇವಿಸುತ್ತಿದ್ದ 21 ವರ್ಷದೊಳಗಿನ 64 ಯುವಕರು, 23 ಯುವತಿಯರು ಹಾಗೂ 17 ವರ್ಷದ ಓರ್ವ ಅಪ್ರಾಪ್ತ ಯುವಕ ಪತ್ತೆಯಾಗಿದ್ದಾರೆ.