ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಕೇಂದ್ರ, ಕಾರ್ಮಿಕ ಇಲಾಖೆಯವರು ಕ್ಯುಆರ್ ಕೋಡ್ಅನ್ನು ಸಾರ್ವಜನಿಕರಿಗೆ ಗೋಚರಿಸುವಂತೆ ದೊಡ್ಡದಾಗಿ ಅಳವಡಿಸಿಬೇಕು. ಬಸ್ ನಿಲ್ದಾಣ, ಕೈಗಾರಿಕಾ ಹಾಗೂ ಕಾರ್ಮಿಕ ಅಸೋಸಿಯೇಷನ್ ಕಡೆಗಳಲ್ಲಿ ಹಾಗೂ ಸಿನಿಮಾ ಹಾಲ್ಗಳಲ್ಲಿ ಈ ಕುರಿತು ಪ್ರಚಾರ ಪಡಿಸಬೇಕು. ಮಾದಕ ವಸ್ತು ಸೇವನೆಯಿಂದ ಆರೋಗ್ಯ, ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅಲ್ಲದೆ, ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ ಎಂದರು.