ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರ ಕ್ರಮ

ಕುಂಜಿಬೆಟ್ಟಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಬೈಕ್ ಚಾಲಕರಿಗೆ ದಂಡ ವಿಧಿಸಿದ ಪೊಲೀಸರು
ಕುಂಜಿಬೆಟ್ಟಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಬೈಕ್ ಚಾಲಕರಿಗೆ ದಂಡ ವಿಧಿಸಿದ ಪೊಲೀಸರು
Published on
ಮಂಗಳವಾರ 52 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ನಿಯಮ ಉಲ್ಲಂಘಿಸಿದವರಿಂದ ಸುಮಾರು 27,000 ರೂ. ದಂಡ ವಸೂಲಿ ಮಾಡಲಾಗಿದೆ. ಬುಧವಾರ ತಪಾಸಣೆ ಮುಂದುವರಿಸಿದ ಪೊಲೀಸರು 50 ಪ್ರಕರಣ ದಾಖಲಿಸಿದ್ದು, ಸುಮಾರು 26,000 ರೂ. ದಂಡ ವಿಧಿಸಿದ್ದಾರೆ.
ಗುರುವಾರ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ನಿಯಮ ಉಲ್ಲಂಘಿಸುತ್ತಿರುವ ವಾಹನ ಚಾಲಕರಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.. ಗುಂಡಿಬೈಲು ಹಾಗೂ ಮಣಿಪಾಲ ಕಡೆಗೆ ಫ್ರೀ ಲೆಫ್ಟ್ ನಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ​ಹೆಲ್ಮೆಟ್ ರಹಿತ ಚಾಲನೆ, ಅತಿವೇಗ, ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸುವುದು ಹಾಗೂ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವವರ ಮೇಲೆ ಪೊಲೀಸರು ವಿಶೇಷ ನಿಗಾ ಇಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net