ಪ್ಲಸ್‌ಟು ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

ಆತ್ಮಹತ್ಯೆ
ಆತ್ಮಹತ್ಯೆ
Published on
ಕಾಸರಗೋಡು: ಅಡೂರು ಪಾಂಡಿ ಬಿಳಿಯ ಬೆಳ್ಳಚ್ಚೇರಿ ನಿವಾಸಿ ಶಶಿ ಎಂಬುವರ ಪುತ್ರ, ಅಡೂರು ಪಾಂಡಿಯಲ್ಲಿ ಪ್ಲಸ್‌ಟು ವಿದ್ಯಾರ್ಥಿಯಾಗಿರುವ ಗೋಕುಲ್(17) ಎಂಬಾತನ ಮೃತದೇಹ ಮನೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗೋಕುಲ್ ಮನೆಯ ಬೆಡ್‌ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಈತನನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಲಿಲ್ಲ. ಘಟನೆ ವೇಳೆ ತಾಯಿ ಹಾಗೂ ಗೋಕುಲ್ ಮಾತ್ರವೇ ಮನೆಯಲ್ಲಿದ್ದರು. ಜ್ವರವಿದ್ದರಿಂದ ಗೋಕುಲ್ ಮಂಗಳವಾರ ಶಾಲೆಗೆ ಹೋಗಿರಲಿಲ್ಲ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net