ಉತ್ತಮ ಆಹಾರಕ್ರಮದಿಂದ ಆರೋಗ್ಯವಂತ ಹೃದಯ: ಡಾ.ಕೃಷ್ಣಾನಂದ ನಾಯಕ್​

 ಹೃದಯ ಆರೋಗ್ಯ ಜಾಗೃತಿ ಶಿಬಿರದಲ್ಲಿ ಕೆಎಂಸಿ ಹೃದಯನಾಳ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಾನಂದ ನಾಯಕ್​ ಮಾತನಾಡಿದರು.
ಹೃದಯ ಆರೋಗ್ಯ ಜಾಗೃತಿ ಶಿಬಿರದಲ್ಲಿ ಕೆಎಂಸಿ ಹೃದಯನಾಳ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಾನಂದ ನಾಯಕ್​ ಮಾತನಾಡಿದರು.
Published on
ಉಡುಪಿ: ಒತ್ತಡ ರಹಿತ ಜೀವನಶೈಲಿ ಹಾಗೂ ನಿರಂತರ ಆರೋಗ್ಯ ತಪಾಸಣೆ, ಉತ್ತಮ ಆಹಾರಕ್ರಮವನ್ನು ಅಳವಡಿಸಿಕೊಂಡರೆ ಆರೋಗ್ಯವಂತ ಹೃದಯ ಪಡೆಯಬಹುದು ಎಂದು ಮಣಿಪಾಲ ಕೆಎಂಸಿ ಹೃದಯನಾಳ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಾನಂದ ನಾಯಕ್​ ಹೇಳಿದರು.

ಭಾರತ ವಿಕಾಸ ಪರಿಷತ್​ ಮತ್ತು ಪ್ಲವ ಫೌಂಡೇಶನ್​ ವತಿಯಿಂದ ಕಡಿಯಾಳಿ ದೇವಸ್ಥಾನದ ಕಾತ್ಯಾಯನಿ ಮಂಟಪದಲ್ಲಿ ನಡೆದ ಹೃದಯ ಆರೋಗ್ಯ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆಹಾರದ ಕಲಬೆರಕೆ ಮತ್ತು ಮಾಲಿನ್ಯದಿಂದ ಯುವಜನರೂ ದಿಢೀರ್​ ಹೃದಯಾಘಾತ ಸೇರಿದಂತೆ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಆಹಾರ ತಯಾರಿಕಾ ಟಕಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ರಾಸಾಯನಿಕಯುಕ್ತ ಆಹಾರಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಹೇಳಿದರು.

ಪ್ಲವ ಫೌಂಡೇಶನ್​ ಕಾರ್ಯನಿರ್ವಾಹಕ ನಿರ್ದೇಶಕಿ ರಶ್ಮಿ ಸಾಮಂತ್​ ಪ್ರಸ್ತಾವಿಕವಾಗಿ ಮಾತನಾಡಿದರು.
ಕಸ್ತೂರ್ಬಾ ವೈದ್ಯಕಿಯ ಕಾಲೇಜಿನ ಮುಖ್ಯ ಆಹಾರ ತಜ್ಞೆ ಸುವರ್ಣ ಹೆಬ್ಬಾರ್​ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ದೇಹಪ್ರಕೃತಿ ಪ್ರತ್ಯೇಕವಾಗಿರುತ್ತದೆ. ಹೀಗಾಗಿ ಆಹಾರಕ್ರಮವೂ ವಿಭಿನ್ನವಾಗಿರುತ್ತದೆ. ಹೆಚ್ಚಾಗಿ ಹಿಂದಿನ ತಲೆಮಾರುಗಳಿಂದ ಆಯಾ ಮನೆತನದಲ್ಲಿ ಬಂದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ. ಋತುಮಾನದ ಹಣ್ಣುಗಳು, ತುಪ್ಪ, ತೆಂಗಿನಎಣ್ಣೆ ದೇಹಕ್ಕೆ ಉತ್ತಮ. ಆದರೆ ಯಾವುದೇ ಆಹಾರ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಸೇವಿಸಬಾರದು ಎಂದು ತಿಳಿಸಿದರು.

ಪ್ಲವ ಫೌಂಡೇಶನ್​ ಕಾರ್ಯನಿರ್ವಾಹಕ ನಿರ್ದೇಶಕಿ ರಶ್ಮಿ ಸಾಮಂತ್​ ಪ್ರಸ್ತಾವಿಕವಾಗಿ ಮಾತನಾಡಿದರು. ಭಾರತ ವಿಕಾಸ ಪರಿಷತ್​ ಭಾರ್ಗವ ಶಾಖೆ ಅಧ್ಯಕ್ಷ ಕೃಷ್ಣದಾಸ್​ ಸಿ.ಪಿ., ಕಾರ್ಯದರ್ಶಿ ಸುಬ್ರಾಯ ಶೆಣೈ, ಕೋಶಾಧಿಕಾರಿ ಮೋಹನ್​ ಶಾನುಭೋಗ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net