ಕುಂದಾಪುರ ವಲಯದಲ್ಲಿ 119 ಪ್ರಾಥಮಿಕ ಹಾಗೂ 20 ಸರ್ಕಾರಿ ಪ್ರೌಢಶಾಲೆಗಳಿವೆ. ಒಟ್ಟು 19 ಶಾಲೆಗಳಿಂದ ವಿವಿಧ ಬೇಡಿಕೆಗಳು ಬಂದಿವೆ. ಅವುಗಳಲ್ಲಿ ಪ್ರಮುಖವಾಗಿ ಮೂಡು ಹಾಲಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುದೂರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಟ್ಟಡ, ಛಾವಣಿ ದುರಸ್ತಿ ತುರ್ತಾಗಿ ಆಗಬೇಕಿದೆ. ಇನ್ನು ಹಟ್ಟಿಕುದ್ರು ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕನ್‌ಸಾಲ್ ಹಿರಿಯ ಪ್ರಾಥಮಿಕ ಶಾಲೆ, ಯಡಾಡಿ ಮತ್ಯಾಡಿ ಹಿರಿಯ ಪ್ರಾಥಮಿಕ ಶಾಲೆ, ರಟ್ಟಾಡಿ ಹಿರಿಯ ಪ್ರಾಥಮಿಕ ಶಾಲೆ, ನಡಂಬೂರು ಶಾಲೆ, ಹೊಸ ಬಡಾಕೆರೆ ಶಾಲೆ, ಸೂರ್ಗೋಳಿ ಶಾಲೆ, ಕುಂದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾರ್ದಳ್ಳಿ ಮಂಡಳ್ಳಿ ಶಾಲೆ, ಗೋಳಿಯಂಗಡಿ ಕಿರಿಯ ಪ್ರಾಥಮಿಕ ಶಾಲೆ, ಜಡ್ಡಿನಗದ್ದೆ ಹಿರಿಯ ಪ್ರಾಥಮಿಕ ಶಾಲೆ, ತಾರೆಕೊಡ್ಲು ಕಿರಿಯ ಪ್ರಾಥಮಿಕ ಶಾಲೆ, ಚಿತ್ತೇರಿ ಹಿರಿಯ ಪ್ರಾಥಮಿಕ ಶಾಲೆ, ಜಾಂಬೂರು ಹಿರಿಯ ಪ್ರಾಥಮಿಕ ಶಾಲೆ, ಉಳ್ಳೂರು 74 ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಂಕರನಾರಾಯಣ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನೆಲ, ಕಿಟಕಿ, ಶೌಚಗೃಹ ಇನ್ನಿತರ ದುರಸ್ತಿ ಬೇಡಿಕೆಗಳು ಬಂದಿವೆ.