ಸಂತೆಕಟ್ಟೆ ಮಾರ್ಕೆಟ್ ಹಿಂಭಾಗದ ರಸ್ತೆಯಲ್ಲಿ ಮಾಂಸಗಳ ತ್ಯಾಜ್ಯವನ್ನೂ ತುಂಬಿದ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಎಸೆಯುತ್ತಾರೆ. ಅದರಲ್ಲಿರುವ ಆಹಾರ ತಿನ್ನಲು ಬೀದಿನಾಯಿಗಳು ಬಂದು ಕವರ್ಗಳನ್ನು ಎಳೆದು ರಸ್ತೆಗೆ ತಂದು ಹರಿದು ಚೆಲ್ಲಾಡಿ ತಿನ್ನುತ್ತವೆ. ಅಲ್ಲದೆ, ಈ ಮಾರ್ಗದಲ್ಲಿ ಸಾಗುವ ಅನೇಕ ಬೈಕ್ ಸವಾರರು ಹಾಗೂ ಪಾದಚಾರಿಗಳು, ವಿದ್ಯಾರ್ಥಿಗಳು ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ. ಬೆಳಗ್ಗೆ ವಾಕಿಂಗ್ಗೆ ಬರುವ ಮಹಿಳೆಯರು, ಹಿರಿಯ ನಾಗರಿಕರನ್ನು ಅಲ್ಲಿರುವ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ.