ಆಸ್ಪತ್ರೆ ಸುತ್ತಲಿನ ನಿವೇಶನದ ಅಸ್ವಚ್ಛತೆ, ವಿಪರೀತ ಸೊಳ್ಳೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳು, ಅವರ ಸಹಾಯಕರು ಹಾಗೂ ಸಿಬ್ಬಂದಿಗೂ ತೊಂದರೆ ಆಗಬಹುದಾಗಿದೆ. ಈ ಪರಿಸರದಲ್ಲಿ ಡೆಂಘೆ ಹಬ್ಬಿರುವುದು ದೃಢಪಟ್ಟಿದೆ. ಹೀಗಾಗಿ ಆರೋಗ್ಯ ಇಲಾಖೆ, ನಗರಾಡಳಿತ, ಜಿಲ್ಲಾಡಳಿತ ತಕ್ಷಣವೇ ಈ ಸ್ಥಳದಲ್ಲಿ ಅನಗತ್ಯ ಬೆಳೆದಿರುವ ಗಿಡಗಂಟಿ ಕಟಾವು ಮಾಡಿಸಬೇಕು. ಪರಿಸರದ ಅಂದ, ಶುಭ್ರತೆ ಕೆಡಿಸುತ್ತಿರವ ಪ್ಲಾಸ್ಟಿಕ್ ಕಸ, ಕುಡಿದು ಬಿಸಾಡಿದ ಸಾರಾಯಿ ಬಾಟಲಿ, ತ್ಯಾಜ್ಯಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.