ಛಾಯಾಗ್ರಾಹಕರಲ್ಲಿರಲಿ ತಾಳ್ಮೆ, ಏಕಾಗ್ರತೆ

ಡಾ.ವೀರೇಂದ್ರ ಹೆಗ್ಗಡೆ
ಡಾ.ವೀರೇಂದ್ರ ಹೆಗ್ಗಡೆ
Published on

ಬೆಳ್ತಂಗಡಿ: ಛಾಯಾಗ್ರಾಹಕರು ತಾಳ್ಮೆ, ಏಕಾಗ್ರತೆ ಹಾಗೂ ಸೃಜನಶೀಲತೆ ಬೆಳೆಸಿಕೊಳ್ಳಬೇಕು. ಉತ್ತಮ ಛಾಯಾಚಿತ್ರ ಕೇವಲ ಕ್ಯಾಮರಾದಿಂದ ಮೂಡುವುದಿಲ್ಲ. ನೋಡುವ ದೃಷ್ಟಿಕೋನ, ಸಮಯಪ್ರಜ್ಞೆ ಹಾಗೂ ವಿಷಯದ ಆಳವಾದ ಅರಿವಿನಿಂದ ಮೂಡುತ್ತದೆ. ವಿವಿಧ ಕೋನಗಳಿಂದ ವಿಷಯ ಅವಲೋಕಿಸಿ, ಸೂಕ್ತ ಕ್ಷಣ ಸೆರೆಹಿಡಿಯುವ ಸಾಮರ್ಥ್ಯ ಛಾಯಾಗ್ರಾಹಕರು ರೂಢಿಸಿಕೊಳ್ಳಬೇಕು ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆ 44 ವರ್ಷಗಳ ಸಾಧನೆಯ ಮೈಲಿಗಲ್ಲಾದ 1000ನೇ ತರಬೇತಿ ಕಾರ್ಯಕ್ರಮವಾದ ಛಾಯಾಗ್ರಹಣ ಮತ್ತು ವೀಡಿಯೋಗ್ರಾಫಿ ತರಬೇತಿಗೆ ಕ್ಯಾಮರಾದಲ್ಲಿ ಛಾಯಾಚಿತ್ರ ಸೆರೆಹಿಡಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಸುನೀಲ್ ಜಿ.ನಾಯ್ಕ, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಲೋಹಿತ್ ಜೈನ್, ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯಕುಮಾರ್ ಸ್ವಾಗತಿಸಿ, ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net