ಕಿರುಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡ ಬಳಿಕ ಖಾಸಗಿ ಗದ್ದೆ ಪ್ರದೇಶದಲ್ಲಿ ಮಣ್ಣಿನ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಮಳೆಗೆ ಈ ರಸ್ತೆ ಸಂಪೂರ್ಣ ಹೊಂಡ-ಗುಂಡಿಯಾಗಿದ್ದು, ಪರಾರಿಯಿಂದ ಪೆರ್ಮಂಕಿ ಕಡೆಗೆ ಸಂಚರಿಸುವುದೇ ಕಷ್ಟದ ಕೆಲಸವಾಗಿದೆ. ಒಂದೊಮ್ಮೆ ಮಳೆ ಜಾಸ್ತಿಯಾದಲ್ಲಿ ಕೃಷಿಗೆ ಅನುಕೂಲವಾಗುವಂತೆ ರಸ್ತೆ ಮುಚ್ಚಬೇಕಾಗುತ್ತದೆ. ಆಗ ಸರ್ಕಾರಿ ಬಸ್ ಸಹಿತ ಸಾರ್ವಜನಿಕರ ಸಂಪರ್ಕ ಕಡಿದು ಹೋಗಲಿದೆ. ಹೊಸ ಸೇತುವೆ ಬಳಿ ತಕ್ಷಣ ಚರಂಡಿ ನಿರ್ಮಿಸುವಂತೆ, ಉಳಾಯಿಬೆಟ್ಟಿನಲ್ಲಿ ಕಿರು ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ವಿಶ್ವನಾಥ ಶೆಟ್ಟಿ ಆಗ್ರಹಿಸಿದ್ದಾರೆ.