ನಿಟ್ಟೆ ಕಾಲೇಜಲ್ಲಿ ವೀರ ಬಬ್ರುವಾಹನ ಪ್ರದರ್ಶನ

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ "ವೀರ ಬಬ್ರುವಾಹನ' ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ "ವೀರ ಬಬ್ರುವಾಹನ' ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • 40 ಗಂಟೆಗಳ ಕಾಲ ಯಕ್ಷಗಾನ ತರಬೇತಿ
  • ಉತ್ತಮ ಪ್ರತಿಕ್ರಿಯೆ
ವಿಜಯವಾಣಿ ಸುದ್ದಿಜಾಲ ಕಾರ್ಕಳ
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 6ನೇ ಸೆಮಿಸ್ಟರ್​ ಬಿಟೆಕ್​ ವಿದ್ಯಾರ್ಥಿಗಳು ಆಯ್ಕೆ ಮಾಡಿದ್ದ "ಯಕ್ಷಗಾನದ ಪರಿಚಯ' ಎಂಬ ಐಚ್ಛಿಕ ಕೋರ್ಸ್​ನ ಸೆಮಿಸ್ಟರ್​ ಮೌಲ್ಯಮಾಪನದ ಭಾಗವಾಗಿ ಇತ್ತೀಚೆಗೆ ಕಾಲೇಜಿನಲ್ಲಿ "ವೀರ ಬಬ್ರುವಾಹನ' ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು.

40 ಗಂಟೆಗಳ ಕಾಲ ಯಕ್ಷಗಾನ ತರಬೇತಿ

ರಾಷ್ಟ್ರೀಯ ಶಿಕ್ಷಣ ನೀತಿ ಮಾರ್ಗಸೂಚಿಗಳ ಪ್ರಕಾರ "ಯಕ್ಷಗಾನದ ಪರಿಚಯ' ವಿಷಯವನ್ನು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಪರಿಚಯಿಸಲಾಗಿತ್ತು. ರಸಾಯನಶಾಸ ವಿಭಾಗದ ಪ್ರಾಧ್ಯಾಪಕ ಡಾ.ಜನಾರ್ದನ ನಾಯಕ್​ ಅವರು ಸೆಮಿಸ್ಟರ್​ನಲ್ಲಿ ವಿದ್ಯಾರ್ಥಿಗಳಿಗೆ 40 ಗಂಟೆಗಳ ಕಾಲ ಯಕ್ಷಗಾನ ತರಬೇತಿ ನೀಡಿದ್ದಾರೆ.

ಉತ್ತಮ ಪ್ರತಿಕ್ರಿಯೆ

ಕೋರ್ಸ್​ನ ಭಾಗವಾಗಿ ಯಕ್ಷಗಾನ, ತಾಳ, ನಾಟ್ಯ, ವೇಷ, ಸಂವಾದ ಇತ್ಯಾದಿಗಳ ಮೂಲ ವಿಷಯಗಳನ್ನು ಕಲಿಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net