ಬಡಾವಣೆಯಲ್ಲಿನ ನೀರು ವಿದ್ಯುತ್ , ಶಾಲೆ ಆಸ್ಪತ್ರೆ, ರಸ್ತೆ, ಒಳಚರಂಡಿ ವ್ಯವಸ್ಥೆ ಇತ್ಯಾದಿ ಮೂಲಭೂತ ಸೌಕರ್ಯಗಳ ಬಗ್ಗೆ ಕೇಳಿ ಮಾಹಿತಿ ಪಡೆದರು. ಬಳಿಕ ಸನಾತನ ಧರ್ಮದ ಪಾಲನೆ , ನಿತ್ಯ ದೇವರ ನಾಮಸ್ಮರಣೆ , ಕರ್ತವ್ಯ ಹಾಗೂ ರಾಷ್ಟ್ರ ನಿಷ್ಠೆ ಇತ್ಯಾದಿಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ತಿಳಿಸಿದರು. ಪ್ರತಿ ಮನೆ, ಕೇರಿ, ಬಡಾವಣೆಯ ಸ್ವಚ್ಛತೆಯ ಪಾಲನೆ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ , ಸಂಸ್ಕಾರ ನೀಡಬೇಕು, ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದರು. ನಂತರ ಬಡಾವಣೆಯ ಮಂದಿರದ ಆವರಣದಲ್ಲಿ ಸೇರಿದ್ದ 500ಕ್ಕೂ ಅಧಿಕ ಜನರಿಗೆ ರಾಮಮಂತ್ರೋಪದೇಶ, ಧರ್ಮಸಂದೇಶ ನೀಡಿದರು.