ಬಡವಣೆಯ 300ಕ್ಕೂ ಅಧಿಕ ಮಂದಿ ಶ್ರೀಗಳನ್ನು ಹೂವಿನ ಮಳೆಗರೆದು ಬಡಾವಣೆಯ ರಸ್ತೆಗಳಲ್ಲಿ ರಂಗೋಲಿಯಿಂದ ಅಲಂಕರಿಸಿ ಭಕ್ತಿಯಿಂದ ಸ್ವಾಗತಿಸಿದರು. ಆರಂಭದಲ್ಲಿ 5 ಮನೆಗಳಿಗೆ ತೆರಳಿ ಶ್ರೀ ಮಠದ ವತಿಯಿಂದ ನೀಡಿದ ಅಯೋಧ್ಯೆ ಶ್ರೀರಾಮ ಹಾಗೂ ಉಡುಪಿ ಕೃಷ್ಣನ ಫೋಟೋಗಳನ್ನಿಟ್ಡು ದೀಪಗಳನ್ನು ಬೆಳಗಿದರು. ಮನೆಮಂದಿಗೆ ಹತ್ತು ಬಾರಿ ರಾಮಮಂತ್ರವನ್ನು ಉಪದೇಶಿಸಿ, ಪ್ರಸಾದ ನೀಡಿ ಆಶೀರ್ವದಿಸಿದರು. ನಿತ್ಯ ರಾಮಕೃಷ್ಣ ಮಂತ್ರ ಜಪಿಸುವಂತೆ ಸೂಚಿಸಿದರು. ಮಠದ ವತಿಯಿಂದ ಸಿಹಿತಿಂಡಿಯುಳ್ಳ ಪ್ರಸಾದದ ಕಿಟ್ ವಿತರಿಸಲಾಯಿತು. ಸ್ಥಳಿಯ ಶಾಸಕ ಕುಲವಂತ ರಾಣಾ ಉಪಸ್ಥಿತರಿದ್ದರು. ವಿಶ್ವಹಿಂದು ಪರಿಷತ್ ಮತ್ತು ಸೇವಾಭಾರತಿಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.