ಸಮಾಜಕ್ಕೆ ವಿಶ್ವೇಶತೀರ್ಥರ ಕೊಡುಗೆ ಸದಾ ಪ್ರೇರಣಾದಾಯಿ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಭೇಟಿ ಮಾಡಿದ ಪೇಜಾವರ ಶ್ರೀ ಪ್ರಧಾನಿ ನಿವಾಸದಲ್ಲಿ ಶ್ರೀವಿಶ್ವೇಶತೀರ್ಥರ ಜನ್ಮ ಶತಾಬ್ದ ಪಂಚವಾರ್ಷಿಕ ಯೋಜನೆ ಲಾಂಛನ ಬಿಡುಗಡೆ
pejavara sri met modi
ಪ್ರಧಾನಿ ಶ್ರೀವಿಶ್ವೇಶ ತೀರ್ಥರ ಜನ್ಮ ಶತಾಬ್ದ ಪಂಚವಾರ್ಷಿಕ ಯೋಜನೆ ಲಾಂಛನ ಬಿಡುಗಡೆ ಮಾಡಿದರು.
Published on

ಉಡುಪಿ: ಶ್ರೀ ವಿಶ್ವೇಶತೀರ್ಥರು ಸಮಾಜಕ್ಕೆ ನೀಡಿರುವ ಕೊಡುಗೆ ಸದಾ ಪ್ರೇರಣಾದಾಯಿಯಾಗಿದೆ. ಉಡುಪಿ ಜನಸಂದ ಕಾಲದಿಂದಲೂ ಜನಸೇವೆಗೆ ನೀಡಿದ ಅವಕಾಶ ಸ್ಮರಣೀಯವಾಗಿದೆ. ಗುರುಗಳ ಜನ್ಮ ಶತಾಬ್ದ ಯೋಜನೆಗಳು ಯಶಸ್ವಿಯಾಗಿ ಸಮಾಜಕ್ಕೆ ಶಕ್ತಿ ತುಂಬಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಂಗಳವಾರ ಪ್ರಧಾನಿ ನಿವಾಸದಲ್ಲಿ ಶ್ರೀವಿಶ್ವೇಶತೀರ್ಥರ ಜನ್ಮ ಶತಾಬ್ದ ಪಂಚವಾರ್ಷಿಕ ಯೋಜನೆ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು. ಉಡುಪಿ ಹಾಗೂ ದ್ವಾರಕೆಗೆ ಬಹಳ ಗಾಢ ಸಂಬಂಧವಿದೆ. ಆದ್ದರಿಂದ ಜನ್ಮಶತಾಬ್ದ ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸಿಕೊಂಡು ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಧಾನಿಯವರಿಗೆ ಯಕ್ಷಗಾನ ರಾಜಕಿರೀಟ ತೊಡಿಸಿ, ಸ್ವರ್ಣ ಲೇಪಿತ ಕಾಲೀಯ ಕೃಷ್ಣನ ಪ್ರತಿಮೆ ಸಹಿತ ಫಲ ಮಂತ್ರಾಕ್ಷತೆ ನೀಡಿ ಸನ್ಮಾನಿಸಿದರು. ಮೋದೀಜೀಯವರ ಜನ್ಮದಿನ ಅವರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ವೇದವ್ಯಾಸ ಗುರುಕುಲದಲ್ಲಿ ಆಯೋಜಿಸಿದ್ದ ಪೂರ್ಣ ನವಗ್ರಹ ಹೋಮದ ಪ್ರಸಾದವನ್ನೂ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್​ , ಉದ್ಯಮಿ ಪಿ. ರಾಮ್​ ಪ್ರಸಾದ್​, ಕೆ.ಪ್ರಕಾಶ್​ ಶೆಟ್ಟಿ , ರವಿ ಶ್ಯಾಮ್​ , ಹರೀಶ್​ ರಾಯಸ್​ , ನವದೆಹಲಿ ಕೇಂದ್ರೀಯ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ , ಮೈಸೂರಿನ ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಎಚ್​.ವಾಸುದೇವ ಭಟ್​, ಬದರಿ ನಾರಾಯಣ ಲಡ್ಡಾ, ಶ್ರೀನಿವಾಸ ಪ್ರಸಾದ್​ ಮೈಸೂರು, ಟಿ.ಪಿ ಅನಂತ್​ ಬೆಂಗಳೂರು, ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ.ವಿಠೋಬಾಚಾರ್ಯ, ಸ್ವಾಮೀಜಿಯವರ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್​ ಉಪಸ್ಥಿತರಿದ್ದರು. ಮಠದ ಪಿಆರ್​ಒ ವಾಸುದೇವ ಭಟ್​ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net