ಲಕ್ಷ ರೂ. ಮೌಲ್ಯದ ಸುಲಿದ ಅಡಿಕೆ ಕಳವು

theft
theft
Published on

ಕಾಸರಗೋಡು: ಮುಳ್ಳೇರಿಯಾ ಬೇಂಗತ್ತಡ್ಕದಲ್ಲಿ ಮನೆ ಸಮೀಪದ ದಾಸ್ತಾನು ಕೊಠಡಿಯಲ್ಲಿರಿಸಿದ್ದ ಎರಡು ಕ್ವಿಂಟಾಲ್ ಸುಲಿದ ಅಡಕೆ ಕಳವಾಗಿರುವ ಬಗ್ಗೆ ಆದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಳ್ಳೇರಿಯ ಬೇಂಗತ್ತಡ್ಕ, ನಾವುಂಗಾಲ್ ನಿವಾಸಿ ಎನ್.ಬಾಲಕೃಷ್ಣನ್ ದೂರು ನೀಡಿದ್ದಾರೆ. ಜುಲೈ 19ರಿಂದ 29ರ ಮಧ್ಯೆ ದಾಸ್ತಾನು ಕೊಠಡಿಯಲ್ಲಿ ಮೂರು ಗೋಣಿ ಚೀಲಗಳಲ್ಲಿ ಸಂಗ್ರಹಿಸಿಡಲಾಗಿದ್ದ ಒಂದು ಲಕ್ಷ ರೂ. ಮೌಲ್ಯದ ಸುಲಿದ ಅಡಕೆ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net