ವೈದ್ಯಕೀಯ ಚಿಕಿತ್ಸೆಯನ್ನೂ ಮೀರಿದ್ದು ಆರೋಗ್ಯ ಸೇವೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಮೂಳೆ ಮಜ್ಜೆಯ ಕಸಿ ಕೇಂದ್ರ ಉದ್ಘಾಟಿಸಲಾಯಿತು. ಡಾ. ಎಚ್​.ಎಸ್​. ಬಲ್ಲಾಳ್​, ಡಾ. ಅಶೋಕ್​ ಗವಾಂಡೆ, ಡಾ. ಆನಂದ್​ ವೇಣುಗೋಪಾಲ್​, ಡಾ. ಅವಿನಾಶ್​ ಶೆಟ್ಟಿ, ಡಾ. ಅನಿಲ್​ ಕೆ. ಭಟ್​, ಹರಿನಾರಾಯಣ್​ ಶಮಾರ್, ಡಾ. ವಾಸುದೇವ ಭಟ್​ ಕೆ., ಗಿರೀಶ್​ ನಾಯರ್​ ಇತರರಿದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಮೂಳೆ ಮಜ್ಜೆಯ ಕಸಿ ಕೇಂದ್ರ ಉದ್ಘಾಟಿಸಲಾಯಿತು. ಡಾ. ಎಚ್​.ಎಸ್​. ಬಲ್ಲಾಳ್​, ಡಾ. ಅಶೋಕ್​ ಗವಾಂಡೆ, ಡಾ. ಆನಂದ್​ ವೇಣುಗೋಪಾಲ್​, ಡಾ. ಅವಿನಾಶ್​ ಶೆಟ್ಟಿ, ಡಾ. ಅನಿಲ್​ ಕೆ. ಭಟ್​, ಹರಿನಾರಾಯಣ್​ ಶಮಾರ್, ಡಾ. ವಾಸುದೇವ ಭಟ್​ ಕೆ., ಗಿರೀಶ್​ ನಾಯರ್​ ಇತರರಿದ್ದರು.
Published on

* ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಅನಿಸಿಕೆ

* ಕೆಎಂಸಿಯಲ್ಲಿ ಮಕ್ಕಳ ಮೂಳೆ ಮಜ್ಜೆಯ ಕಸಿ ಕೇಂದ್ರ ಉದ್ಘಾಟನೆ

ಉಡುಪಿ: ಅನಾರೋಗ್ಯಕ್ಕೊಳಗಾದ ಮಕ್ಕಳು ಮತ್ತು ಅವರ ಕುಟುಂಬಕ್ಕೆ ಕಷ್ಟದ ಸಮಯದಲ್ಲಿ ಸಹಕರಿಸುವುದು ನಮ್ಮ ಸಂಸ್ಥೆಯ ಸಂಸ್ಥಾಪಕ ಡಾ. ಟಿಎಂಎ ಪೈ ಅವರ ಮೌಲ್ಯ ಮತ್ತು ದೃಷ್ಟಿಕೋನವಾಗಿತ್ತು. ಆರೋಗ್ಯ ಸೇವೆಯು ವೈದ್ಯಕೀಯ ಚಿಕಿತ್ಸೆಯನ್ನೂ ಮೀರಿದ್ದು ಎನ್ನುವುದನ್ನು ನಾವು ಯಾವಾಗಲೂ ನಂಬಿದ್ದೇವೆ. ಆ ಉದ್ದೇಶದಿಂದಲೇ ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗೆ ಒಳಗಾಗುವ ಮಕ್ಕಳಿಗೆ ಸುರಕ್ಷತೆ ಮತ್ತು ಕಾಳಜಿ ತೋರುವ ಕೇಂದ್ರ ತೆರೆಯಲು ಕೆಎಂಸಿಯಲ್ಲಿ ಸ್ಥಳಾವಕಾಶ ಒದಗಿಸಲಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ನ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೂಳೆ ಮಜ್ಜೆಯ ಕಸಿ ಮಾಡಿಸಿಕೊಳ್ಳುವ ಮಕ್ಕಳಿಗೆ ಮೀಸಲಾಗಿ ಆಕ್ಸೆಸ್​ ಲೈಫ್​, ಮಾಹೆ ಮತ್ತು ಚೆಲ್ಲಾರಾಮ್​ ಫೌಂಡೇಷನ್​ ಸಹಭಾಗಿತ್ವದಲ್ಲಿ ಆರಂಭಿಸಲಾದ 'ಹೋಮ್​ ಅವೇ ಫ್ರಮ್​ ಹೋಮ್​' ಸೌಲಭ್ಯದ ಕರ್ನಾಟಕದ ಮೊದಲ ಕೇಂದ್ರವನ್ನು ಶನಿವಾರ (ಮೇ 23) ಉದ್ಘಾಟಿಸಿ ಮಾತನಾಡಿದರು.
ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆಯ ಕಸಿ ಕೇಂದ್ರವನ್ನು ಡಾ. ಎಚ್​.ಎಸ್​. ಬಲ್ಲಾಳ್​ ಉದ್ಘಾಟಿಸಿದರು.
ಮುಂಬೈನ ಚೆಲ್ಲಾರಾಮ್​ ಫೌಂಡೇಷನ್​ನ ಭಾರತದ ಮುಖ್ಯಸ್ಥ ಡಾ. ಅಶೋಕ್​ ಗವಾಂಡೆ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್​ ವೇಣುಗೋಪಾಲ್​, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್​ ಡಾ. ಅನಿಲ್​ ಕೆ. ಭಟ್​, ಮಣಿಪಾಲ ಫೌಂಡೇಷನ್​ನ ಸಿಇಒ ಹರಿನಾರಾಯಣ್​ ಶರ್ಮಾ, ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ ಭಟ್​ ಕೆ., ಆಕ್ಸೆಸ್​ ಲೈಫ್​ ಅಸಿಸ್ಟೆನ್ಸ್​ ಫೌಂಡೇಷನ್​ನ ಸ್ಥಾಪಕಾಧ್ಯಕ್ಷ ಗಿರೀಶ್​ ನಾಯರ್​, ಸಹಸಂಸ್ಥಾಪಕ ಅಂಕಿತ್​ ದೇವ್​ ಉಪಸ್ಥಿತರಿದ್ದರು.

ಮಾಹೆ ಸಹಭಾಗಿತ್ವದ 2ನೇ ಟಕ

ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗಳಿಗೆ ಒಳಗಾಗುವ ಮಕ್ಕಳಿಗಾಗಿ ವಿಶೇಷವಾಗಿ 10 ಘಟಕಗಳ ಸೌಲಭ್ಯ ವಿನ್ಯಾಸಗೊಳಿಸಲಾಗಿದೆ, ಚಿಕಿತ್ಸೆ ಮತ್ತು ಚೇತರಿಕೆಯ ಸಮಯದಲ್ಲಿ ರೋಗನಿರೋಧಕ ಶಕ್ತಿ ತೀವ್ರವಾಗಿ ದುರ್ಬಲಗೊಳ್ಳುತ್ತವೆ. ಈ ಸಂದರ್ಭದಲ್ಲಿ ಸುರಕ್ಷತೆ, ನೈರ್ಮಲ್ಯ ಮತ್ತು ನಿಯಂತ್ರಿತ ವಾತಾವರಣ ಬಹಳ ಮುಖ್ಯವಾಗಿದ್ದು, ಈ ಕೇಂದ್ರ ಪೂರಕವಾಗಿದೆ. ಇದು ಮಾಹೆ ಸಹಭಾಗಿತ್ವದ ಆಕ್ಸೆಸ್​ ಲೈಫ್​ನ ಎರಡನೇ ಕೇಂದ್ರವಾಗಿದೆ. ಆಸ್ಪತ್ರೆ ಮೂಲಸೌಕರ್ಯವನ್ನೂ ಮೀರಿ ಮಕ್ಕಳ ಕ್ಯಾನ್ಸರ್​ ಆರೈಕೆ ಮತ್ತು ಕುಟುಂಬ ಬೆಂಬಲ ಸೇವೆಗಳ ಸಮಗ್ರ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ.
"

ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ನಲ್ಲಿರುವ ಈ ಕೇಂದ್ರವು ನಮ್ಮ ಪ್ರಯಾಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು. ವಸತಿ, ಪೋಷಣೆ ಅಥವಾ ವೈದ್ಯಕೀಯೇತರ ಸವಾಲುಗಳಿಂದಾಗಿ ಯಾವುದೇ ಮಗುವು ಕ್ಯಾನ್ಸರ್​ ಚಿಕಿತ್ಸೆಯಿಂದ ವಂಚಿತವಾಗಬಾರದು ಎನ್ನುವುದು ನಮ್ಮ ಉದ್ದೇಶ. ಅದಕ್ಕೆ ಈ ಕೇಂದ್ರವು ಖಚಿತ ವಿಶ್ವಾಸವಾಗಿದೆ.

— ಗಿರೀಶ್​ ನಾಯರ್​. ಆಕ್ಸೆಸ್​ ಲೈಫ್​ ಅಸಿಸ್ಟೆನ್ಸ್​ ಫೌಂಡೇಷನ್​ನ ಸಂಸ್ಥಾಪಕ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net