ಏನಿದು ಯೋಜನೆ?: ಪರಿಶಿಷ್ಟ ಜಾತಿ ಉಪ-ಯೋಜನೆಯಡಿ(ಎಸ್ಸಿ-ಎಸ್ಪಿ), ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ(ಸಿ.ಎಂ.ಎಫ್.ಆರ್.ಐ) ಮಂಗಳೂರು ಪ್ರಾದೇಶಿಕ ಕೇಂದ್ರ ಅನುಷ್ಠಾನಗೊಳಿಸಿದ ಪಂಜರ ಮೀನು ಕೃಷಿ ಪಂಜರದಲ್ಲಿ ಮೀನು ಸಾಕುವುದಕ್ಕೆ ಉತ್ತೇಜನ ನೀಡುತ್ತಿದೆ. ತಲ್ಲೂರಿನ ಯೋಗೀಶ್, ಸದಾನಂದ, ಪವಿತ್ರಾ, ಯಮುನಾ, ಇಂದಿರಾ ಹಾಗೂ ಮಂಜುನಾಥ್ ಈ ಯೋಜನೆ ಫಲಾನುಭವಿಗಳಾಗಿದ್ದು, ಪಂಜರದಲ್ಲಿ ಕಳಸೆ ಮೀನು ಸಾಕಿ ಯಶಸ್ವಿಯಾಗಿದ್ದಾರೆ. ಇದರ ಯಶಸ್ಸಿಗೆ ಸಿ.ಎಂ.ಎಫ್.ಆರ್.ಐ ಮಂಗಳೂರು ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿಗಳಾದ ಡಾ.ರಾಜೇಶ್ ಕೆ.ಎಂ., ಡಾ.ಸುಜಿತಾ ಥಾಮಸ್, ಡಾ.ಬಿಂದು ಸುಲೋಚನನ್, ಹಿರಿಯ ವಿಜ್ಞಾನಿಗಳಾದ ಡಾ.ಪುರುಷೋತ್ತಮ, ಡಾ.ದಿವ್ಯಾ ವಿಶ್ವಂಬರನ್ ಹಾಗೂ ವಿಜ್ಞಾನಿ ಡಾ.ಸುನೀಲ್ ಮೊದಲಾದವರು ಸಹಕರಿಸಿದ್ದಾರೆ.