ಅನುಭವಿ ರೈತ ಆನಂದ ಪೂಜಾರಿ ಕೋಟತಟ್ಟು ಅವರು ನೇಗಿಲನ್ನು ಬಳಸಿ ಟಿಲ್ಲರ್ ಕೂರಿಗೆ ತಯಾರಿಸಿದ್ದಾರೆ. ಹಿಂದೆ ಕೋಣಗಳ ಮೂಲಕ ಸಾಂಪ್ರದಾಯಿಕ ಬಿತ್ತನೆ ಕಾರ್ಯ ನಡೆಯುತ್ತಿತ್ತು. ಈಗ ಯಂತ್ರೋಪಕರಣಗಳ ಮೂಲಕ ಕೃಷಿ ಕಾರ್ಯ ನಡೆಸಲಾಗುತ್ತಿದೆ. ಆನಂದ ಪೂಜಾರಿ ಅವರು ಟ್ರ್ಯಾಕ್ಟರ್ ಕೂರಿಗೆ ಸವಾಲಾಗಿ ಟಿಲ್ಲರ್‌ಗೆ ನೇಗಿಲನ್ನು ಬಳಸಿ ಚೈನ್ ಸಿಸ್ಟಮ್ ಮೂಲಕ ಆರು ವರ್ಷಗಳಿಂದ ಬಿತ್ತನೆ ಮಾಡುತ್ತಿದ್ದು ಯಶಸ್ಸು ಕಂಡಿದ್ದಾರೆ. ತಂದೆ ಆನಂದ ಅವರ ಕೃಷಿ ಕಾಯಕದಲ್ಲಿ ಪುತ್ರ ಗಣೇಶ್ ಕೂಡ ಸಾಥ್ ನೀಡಿದ್ದು, ಹೊಸ ಯಂತ್ರಗಳ ಆವಿಷ್ಕಾರಕ್ಕೆ ತಂದೆಗೆ ನೆರವಾಗುತ್ತಿದ್ದಾರೆ.