ನಿತೀಶ್ ಟ್ರಸ್ಟ್‌ನಿಂದ ಸಮಾಜಕ್ಕೆ ನೆಮ್ಮದಿ

 ಶೇಡಿಮನೆ  ನಿತೀಶ್ ನಾರಾಯಣ ಸ್ಮಾರಕ ಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ.ಎಸ್.ಪರಮೇಶ್ವರ ಉಡುಪ ಅವರನ್ನು ಗೌರವಿಸಲಾಯಿತು. ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ, ಚೆನ್ನ ಪೂಜಾರಿ, ಮಂಜುನಾಥ ಪೂಜಾರಿ, ಜಯಕರ ಶೆಟ್ಟಿ ಇತರರಿದ್ದರು.
ಶೇಡಿಮನೆ ನಿತೀಶ್ ನಾರಾಯಣ ಸ್ಮಾರಕ ಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ.ಎಸ್.ಪರಮೇಶ್ವರ ಉಡುಪ ಅವರನ್ನು ಗೌರವಿಸಲಾಯಿತು. ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ, ಚೆನ್ನ ಪೂಜಾರಿ, ಮಂಜುನಾಥ ಪೂಜಾರಿ, ಜಯಕರ ಶೆಟ್ಟಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಆರ್ಡಿ
ಇತ್ತೀಚೆಗೆ ನಿಧನರಾದ ನಿತೀಶ್ ಅವರ ಹೆಸರು ಸಮಾಜದಲ್ಲಿ ಶಾಶ್ವತವಾಗಿರಲು ಶೇಡಿಮನೆಯಲ್ಲಿ ನಿತೀಶ್ ಮೆಮೋರಿಯಲ್ ಟ್ರಸ್ಟ್ ಸ್ಥಾಪಿಸಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ನೊಂದ ಮನಸ್ಸುಗಳಿಗೆ ನೆಮ್ಮದಿ ದೊರೆಯಲಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.
ಶೇಡಿಮನೆ ನಿತೀಶ್ ನಾರಾಯಣ ಸ್ಮಾರಕ ಮಂಟಪದಲ್ಲಿ ಶೇಡಿಮನೆ ನಿತೀಶ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಶೇಡಿಮನೆ ದಿ.ನಾರಾಯಣ ಪೂಜಾರಿ ಹಾಗೂ ದಿ.ನಿತೀಶ್ ಪೂಜಾರಿ ಅವರ ಸ್ಮರಣಾರ್ಥ ನಾರಾಯಣ ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ, ಭಜನಾ ಕಾರ್ಯಕ್ರಮ, ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, ಭಕ್ತಿ -ಭಾವ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ನುಡಿ ನಮನ ಸಲ್ಲಿಸಿದರು.
ಶೇಡಿಮನೆ ನಿತೀಶ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಚೆನ್ನ ಪೂಜಾರಿ ಅಧ್ಯಕ್ಷತೆ ವಹಿಸಿದರು. ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ, ಪ್ರಮುಖರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ದಯಾನಂದ ಪೂಜಾರಿ, ರಾಜೀವ ಶೆಟ್ಟಿ ಬೆಪ್ಡೆ, ಎಸ್ ಜಯರಾಮ ಶೆಟ್ಟಿ ಸುರ‌್ಗೋಳಿ, ಚಂದ್ರಶೇಖರ ಶೆಟ್ಟಿ ಮೂಡುಬೈಲ್, ನಾಗರಾಜ ಶೆಟ್ಟಿ ಹೆಬ್ರಿ, ಅಶೋಕ ಪೂಜಾರಿ ಬಿಲ್ಲಾಡಿ, ಪ್ರದೀಪ್ ಯಡಿಯಾಳ, ಡಾ.ಎಸ್ ಪರಮೇಶ್ವರ ಉಡುಪ ಉಪಸ್ಥಿತರಿದ್ದರು.
ಶರಾಧ್ಯ ಪ್ರಾರ್ಥಿಸಿದರು. ರಾಜೀವ ಪೂಜಾರಿ ಪಾಟ್ಲಮಕ್ಕಿ ಸ್ವಾಗತಿಸಿದರು. ಸುಧಾಕರ ಪೂಜಾರಿ ಪಾಟ್ಲಮಕ್ಕಿ ವಂದಿಸಿದರು. ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಆರ್.ಪೂಜಾರಿ, ಜಗದೀಶ್ ಪೂಜಾರಿ, ಭೂಮಿಕಾ ಸಹಕರಿಸಿದರು.

ಪ್ರಶಸ್ತಿ ಪ್ರದಾನ, ಗೌರವಾರ್ಪಣೆ

ಡಾ.ಎಸ್. ಪರಮೇಶ್ವರ ಉಡುಪ ಅವರಿಗೆ ನಾರಾಯಣ ಪೂಜಾರಿ ಪ್ರಶಸ್ತಿ ಪ್ರದಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧಕಿಯರಾದ ಐಶ್ವರ್ಯ ಜೋಗಿ ಗೋಳಿಯಂಗಡಿ, ರಚನಾ ಆವರ್ಸೆ, ಜ್ಯೋತಿ ಶೇಡಿಮನೆ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net