ಬಿಳಿನೆಲೆ ಪಿಡಿಒಗೆ ಕಿರುಕುಳ

harassment
harassment
Published on
ಕಡಬ: ಬಿಳಿನೆಲೆ ಪಿಡಿಒ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಾನಹಾನಿಕರವಾಗಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮೂವರ ವಿರುದ್ಧ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಳೆದ 11 ತಿಂಗಳಿನಿಂದ ನೆಟ್ಟಣ ವಾರ್ಡ್ ನಿವಾಸಿಗಳಾದ ಪ್ರಸಾದ್ ಕೆ.ಜಿ., ಜೂಲಿಯಾನ ಹಾಗೂ ರೈಲ್ವೆ ನಿಲ್ದಾಣ ಸಮೀಪದ ಸಜಿತ್ ಕುವಾರ್ ಅವರು ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಪದೇಪದೆ ದೂರು, ಮಾಹಿತಿ ಹಕ್ಕು ಅರ್ಜಿಗಳು, ವಾಟ್ಸಾಪ್ ಸಂದೇಶ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮನ್ನು ಗುರಿಯಾಗಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಕಟ್ಟಡ ನಿರ್ಮಾಣ ಪರವಾನಗಿ, ಖಾಸಗಿ ಜಮೀನಿಗೆ ಸಾರ್ವಜನಿಕ ರಸ್ತೆ ದೃಢೀಕರಣ ಹಾಗೂ ವಾಣಿಜ್ಯ ಪರವಾನಗಿ ಸಂಬಂಧಿಸಿದ ಅರ್ಜಿಗಳಿಗೆ ಕಾನೂನು ತೊಡಕುಗಳಿಂದ ಅನುಮತಿ ನೀಡಲಾಗಿಲ್ಲ. ಇದೇ ವಿಚಾರವಾಗಿ ಜು.8ರಂದು ಪಂಚಾಯಿತಿಗೆ ಆಗಮಿಸಿದ ಆರೋಪಿಗಳು ತಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪಿಡಿಒ ಚಂದ್ರಾವತಿ ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net