ಸೌಹಾರ್ದತೆಗೆ ಶ್ರಮಿಸುವವರೇ ದೇಶಭಕ್ತರು

ಮಲ್ಪೆಯ ತೊಟ್ಟಂ ಚರ್ಚ್​ನಲ್ಲಿ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ  ಉದ್ಘಾಟಿಸಲಾಯಿತು. ಡೆನಿಸ್​ ಡೆಸಾ, ಡಾ.ಗಣನಾಥ ಶೆಟ್ಟಿ ಎಕ್ಕಾರು, ರಫೀಕ್​ ಮಾಸ್ಟರ್​, ವಿನಯ್​ ಸಂದೇಶ್​, ಯಾಹ್ಯಾ ನಕ್ವಾ, ಆಗ್ನೆಲ್​ ಫೆರ್ನಾಂಡಿಸ್​, ಸಿರಾಜ್​, ಶಾಂತಿ ಪಿಕಾರ್ಡೊ, ಲೆಸ್ಲಿ ಆರೋಝಾ, ಬ್ಲೆಸಿಲ್ಲಾ ಕ್ರಾಸ್ತಾ ಇದ್ದರು.
ಮಲ್ಪೆಯ ತೊಟ್ಟಂ ಚರ್ಚ್​ನಲ್ಲಿ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ ಉದ್ಘಾಟಿಸಲಾಯಿತು. ಡೆನಿಸ್​ ಡೆಸಾ, ಡಾ.ಗಣನಾಥ ಶೆಟ್ಟಿ ಎಕ್ಕಾರು, ರಫೀಕ್​ ಮಾಸ್ಟರ್​, ವಿನಯ್​ ಸಂದೇಶ್​, ಯಾಹ್ಯಾ ನಕ್ವಾ, ಆಗ್ನೆಲ್​ ಫೆರ್ನಾಂಡಿಸ್​, ಸಿರಾಜ್​, ಶಾಂತಿ ಪಿಕಾರ್ಡೊ, ಲೆಸ್ಲಿ ಆರೋಝಾ, ಬ್ಲೆಸಿಲ್ಲಾ ಕ್ರಾಸ್ತಾ ಇದ್ದರು.
Published on

* ಡಾ. ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ

* ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ

ಉಡುಪಿ: ಸಂವಿಧಾನದ ಮೂಲ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಸಾಮಾಜಿಕ ನ್ಯಾಯ ಅರಿತು ಜೀವಿಸಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವುದೇ ರಾಷ್ಟ್ರದಲ್ಲಿ ಸೌಹಾರ್ದ ಮನೋಭಾವ ಇರುತ್ತದೆಯೋ ಅಲ್ಲಿ ಅಭಿವೃದ್ಧಿ ಸಾಧ್ಯ. ಯಾರು ಸೌಹಾರ್ದತೆಗೆ ಶ್ರಮಿಸುತ್ತಾರೋ ಅವರೆಲ್ಲ ನೈಜ ದೇಶಭಕ್ತರಾಗಲು ಸಾಧ್ಯ ಎಂದು ಜಾನಪದ ವಿದ್ವಾಂಸ, ಡಾ.ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು.
ಮಲ್ಪೆಯ ತೊಟ್ಟಂ ಚರ್ಚ್​ನಲ್ಲಿ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂ ಹಾಗೂ ಕಥೊಲಿಕ್​ ಸಭಾ ಉಡುಪಿ ಪ್ರದೇಶದ ತೊಟ್ಟಂ ಘಟಕದ ವತಿಯಿಂದ ಸೋಮವಾರ ಸಂಜೆ (ಡಿ.15) ಆಯೋಜಿಸಿದ್ದ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪನಂಬಿಕೆಯಿಂದ ಸಮಸ್ಯೆ

ಸಮಾಜ ಸೇವಕ ರಫೀಕ್​ ಮಾಸ್ಟರ್​ ಮಾತನಾಡಿ, ಎಲ್ಲ ಧರ್ಮಗಳೂ ಸಹ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸದ ಮೌಲ್ಯಗಳನ್ನೇ ನೀಡಿವೆ. ಇತರರನ್ನು ಅಪನಂಬಿಕೆಯಿಂದ ನೋಡುವ ಬದಲು ವಿಶ್ವಾಸದಿಂದ ಕಂಡಾಗ ಯಾವುದೇ ಸಮಸ್ಯೆಗೆ ಅವಕಾಶವಿರದು. ತಾನು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸಿದಾಗ ಎಲ್ಲ ಧರ್ಮಗಳ ಮೌಲ್ಯ ಹೆಚ್ಚಾಗುತ್ತದೆ ಎಂದರು.

ಸಾಧಕರಿಗೆ ಸನ್ಮಾನ

ಸಮಾಜ ಸೇವೆಯೊಂದಿಗೆ ಜನರ ಕಷ್ಟಗಳಿಗೆ ಸ್ಪಂದಿಸುವ ಮುಳುಗು ತಜ್ಞ ಈಶ್ವರ್​ ಮಲ್ಪೆ ಹಾಗೂ ತಂಡ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶ್​ ತಿಂಗಳಾಯ ಮತ್ತು ರೆಜಿನಾಲ್ಡ್​ ಫುರ್ಟಾಡೊ ಅವರನ್ನು ಸನ್ಮಾನಿಸಲಾಯಿತು. ತೊಟ್ಟಂ ಚರ್ಚ್​, ಸಿಎಸ್​ಐ ಚರ್ಚ್​ ಮಲ್ಪೆ ಹಾಗೂ ಇತರರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂನ ಗೌರವಾಧ್ಯಕ್ಷ ವಂ.ಡೆನಿಸ್​ ಡೆಸಾ ಪ್ರಾಸ್ತಾವಿಕವಾಗಿ ಸಂದೇಶ ನೀಡಿದರು. 
ಸಿಎಸ್​ಐ ಎಬನೇಜರ್​ ಚರ್ಚ್​ ಮಲ್ಪೆಯ ಸಭಾಪಾಲಕ ರೆ.ವಿನಯ್​ ಸಂದೇಶ್​, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂನ ಉಪಾಧ್ಯಕ್ಷ ಯಾಹ್ಯಾ ನಕ್ವಾ, ತೊಟ್ಟಂ ಚರ್ಚ್​ನ ಅಂತರ್​ ಧಮೀರ್ಯ ಸಂವಾದ ಆಯೋಗದ ಸಂಚಾಲಕ ಆಗ್ನೆಲ್​ ಫೆರ್ನಾಂಡಿಸ್​, ಜಮಾತೆ ಇಸ್ಲಾಮಿ ಹಿಂದ್​ ಮಲ್ಪೆ ಘಟಕದ ಸಿರಾಜ್​, ಕಥೊಲಿಕ್​ ಸಭಾ ಕಾರ್ಯದರ್ಶಿ ಶಾಂತಿ ಪಿಕಾರ್ಡೊ, ಚರ್ಚ್​ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳಿಯ ಕಾನ್ವೆಂಟ್​ನ ಸಿಸ್ಟರ್​ ಸುಶ್ಮಾ, ಸೌಹಾರ್ದ ಸಮಿತಿ ಹಾಗೂ ಕಥೊಲಿಕ್​ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಥೊಲಿಕ್​ ಸಭಾ ಅಧ್ಯೆ ವೀಣಾ ಫೆರ್ನಾಂಡಿಸ್​ ಸ್ವಾಗತಿಸಿದರು. ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂನ ಅಧ್ಯಕ್ಷ ರಮೇಶ್​ ತಿಂಗಳಾಯ ವಂದಿಸಿದರು. ಲವೀನಾ ಫೆರ್ನಾಂಡಿಸ್​ ಕಾರ್ಯಕ್ರಮ ನಿರೂಪಿಸಿದರು.
"

ಜಗತ್ತಿನ ಎಲ್ಲ ಧರ್ಮಗಳೂ ಕ್ಷಮೆ, ಕರುಣೆ ಮತ್ತು ಪ್ರೀತಿಯ ಸಂದೇಶವನ್ನೇ ಸಾರುತ್ತವೆ. ಎಲ್ಲರೂ ತಮ್ಮ ಧರ್ಮ ಪಾಲಿಸಿ ಇತರ ಧರ್ಮದ ಬಗ್ಗೆ ಅರಿತುಕೊಂಡಾಗ ಸೌಹಾರ್ದತೆ ಮೂಡುತ್ತದೆ. ಪ್ರಮುಖವಾಗಿ ಎಲ್ಲ ಧರ್ಮಗಳಿಗಿಂತ ಮಾನವೀಯ ಧರ್ಮ ಅತಿಶ್ರೇಷ್ಠವಾಗಿದೆ. ಎಲ್ಲ ಹಬ್ಬಗಳ ಮೂಲತತ್ವ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬಾಳುವುದೇ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net