ಯುವಜನತೆ, ಮಕ್ಕಳಲ್ಲಿರಲಿ ದೇಶಾಭಿಮಾನ

ಬದಿಯಡ್ಕದಲ್ಲಿ ತಿರಂಗಾ ಯಾತ್ರೆ ಉದ್ಘಾಟಿಸಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿದರು. ಪ್ರಮುಖರಾದ ಎಂ.ಸುಧಾಮ ಗೋಸಾಡ, ಶಂಕರ ಡಿ., ಯಶೋದಾ, ಮಾಲಿನಿ ಮತ್ತಿತರರು ಇದ್ದರು.
ಬದಿಯಡ್ಕದಲ್ಲಿ ತಿರಂಗಾ ಯಾತ್ರೆ ಉದ್ಘಾಟಿಸಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿದರು. ಪ್ರಮುಖರಾದ ಎಂ.ಸುಧಾಮ ಗೋಸಾಡ, ಶಂಕರ ಡಿ., ಯಶೋದಾ, ಮಾಲಿನಿ ಮತ್ತಿತರರು ಇದ್ದರು.
Published on

ಬದಿಯಡ್ಕ: ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರದ ಬಗ್ಗೆ ಸ್ವಾಭಿಮಾನಿಗಳಾಗಬೇಕೆಂಬ ಉದ್ದೇಶದಿಂದ ಬಿಜೆಪಿ ರಾಷ್ಟ್ರ ಸ್ವಾಭಿಮಾನ್ ಸಮಿತಿ ಎಂಬ ಶಿರೋನಾಮೆಯೊಂದಿಗೆ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ. ತನ್ನ ದೇಶಕ್ಕಾಗಿ ತಾನು ಏನು ಮಾಡಬೇಕು, ತನ್ನನ್ನು ಸಮರ್ಪಿಸಿಕೊಳ್ಳುವುದು ಹೇಗೆ? ಮುಂದಿನ ಪೀಳಿಗೆಗೆ ರಾಷ್ಟ್ರಾಭಿಮಾನ ಜಾಗೃತವಾಗಲು ಪೂರಕವಾಗಿ ಏನು ಮಾಡಬೇಕು ಎಂಬುದನ್ನು ಪ್ರತಿಯೊಬ್ಬರು ಚಿಂತಿಸಬೇಕು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಹೇಳಿದರು.

ರಾಷ್ಟ್ರ ಸ್ವಾಭಿಮಾನ ಸಮಿತಿ ಬದಿಯಡ್ಕ ಮಂಡಲದ ನೇತೃತ್ವದಲ್ಲಿ ಗುರುವಾರ ಬದಿಯಡ್ಕದಲ್ಲಿ ತಿರಂಗಾ ಯಾತ್ರೆ ಉದ್ಘಾಟಿಸಿ ಮಾತನಾಡಿದರು. ಯುವಜನತೆ ಮತ್ತು ಮಕ್ಕಳಲ್ಲಿ ದೇಶಪ್ರೇಮದ ಬೀಜ ಬಿತ್ತುವುದು ಭವಿಷ್ಯ ಭಾರತದ ಭದ್ರತೆಗೆ ಅತ್ಯಗತ್ಯ ಎಂದರು.
ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕೋಜಿಕ್ಕೋಡು ವಲಯ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ, ಗ್ರಾಪಂ ಅಧ್ಯಕ್ಷರಾದ ಶಂಕರ ಡಿ., ಯಶೋದಾ ಕುಂಬ್ಡಾಜೆ, ಮಾಲಿನಿ, ಜಿಪಂ ಸದಸ್ಯ ರಾಮಪ್ಪ ಇದ್ದರು. ಮಂಡಲ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿದರು. ಶ್ರೀಧರ ಬೆಳ್ಳೂರು ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net